ಮುಲ್ಕಿ : ಕೆಂಚನಕೆರೆ ಯೋಗೋ ಪಾಸನಾ ಕೇಂದ್ರದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಯೋಗ ಶಿಕ್ಷಕ ಜಯ ಮುದ್ದು ಶೆಟ್ಟಿ ನೇತೃತ್ವದಲ್ಲಿ ಯೋಗ ದಿನಾಚರಣೆ ಹಾಗೂ ಸಾಧಕರಿಗೆ ಗೌರವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಮಾತನಾಡಿ ರೋಗಮುಕ್ತ ಸಮಾಜ ಯೋಗದಿಂದ ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಮುಲ್ಕಿ ಠಾಣಾ ಇನ್ಸ್ಪೆಕ್ಟರ್ ಕುಸುಮಾಧರ ಮಾತನಾಡಿ ಮನೆಮನೆಯಲ್ಲಿ ಯೋಗ ಬೆಳಗುವುದರ ಮೂಲಕ ವಿಶ್ವಕ್ಕೆ ಯೋಗ ಪಸರಿಸೋಣ ಎಂದರು.
ಅವಿಭಾಜಿತ ದ.ಕ. ಉಡುಪಿ ಜಿಲ್ಲೆ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ, ಶ್ರೀಕಾಂತ್ ಶೆಟ್ಟಿ ಕೆಂಚನಕೆರೆ, ಗಣೇಶ್ ಆಚಾರ್ಯ ಕಿನ್ನಿಗೋಳಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿಸಾಮಾಜಿಕ-ಧಾರ್ಮಿಕ ಮುಂದಾಳು, ಶಿಕ್ಷಣ ಕ್ಷೇತ್ರದ ಹರಿಕಾರ ಕೊಡುಗೈ ದಾನಿ, ಸಾಂಸ್ಕೃತಿಕ ಸಾಹಿತ್ಯಿಕ ರಾಯಭಾರಿ,ಕ.ಸಾ.ಪ. ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ರವರನ್ನು "ವಿಶ್ವ ಯೋಗಾಭಿನಂದನೆ" ಮೂಲಕ ಸನ್ಮಾನಿಸಲಾಯಿತು.
ಸಾಧಕರ ನೆಲೆಯಲ್ಲಿ ಯೋಗ ಶಿಕ್ಷಕ ನಾರಾಯಣ ಎಸ್ ಕೋಟ್ಯಾನ್, ಯಾದವ ದೇವಾಡಿಗ, ಸಹಶಿಕ್ಷಕ ಕುಮಾರ್, ಜಯ ಕುಮಾರ್ ಕುಬೆವೂರು,ಕುಮಾರ್ ಸುಂದರ ಪುನರೂರು ಹಾಗೂಯೋಗ ಶಿಕ್ಷಕ ಜಯ ಮುದ್ದು ಶೆಟ್ಟಿ,ಕು. ಅನುಸ್ಟಿ ರವರನ್ನು ಗೌರವಿಸಲಾಯಿತು.
ಜನಪದ ವಿದ್ವಾಂಸ ಗಣೇಶ್ ಅಮೀನ್ ಸಂಕಮಾರ್ ನಿರೂಪಿಸಿದರು. ಬಳಿಕ ಯೋಗ ಕಾರ್ಯಕ್ರಮ ನಡೆಯಿತು.
Kshetra Samachara
21/06/2022 08:37 am