ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೋವಿಡ್ ಮೂರನೇ ಅಲೆ ಬಳಿಕ ಜಿಲ್ಲೆಯಲ್ಲಿಂದು ಶೂನ್ಯ ಪ್ರಕರಣ!

ಉಡುಪಿ: ಕೋವಿಡ್ ಮೂರನೇ ಅಲೆ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಉಡುಪಿ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ.

ಕೋವಿಡ್ ಪ್ರಮಾಣ ಇಳಿಮುಖವಾದರೂ ಪ್ರತಿದಿನ, ಸಾವಿರಕ್ಕೂ ಅಧಿಕ ಮಂದಿಯ ಗಂಟಲ ದ್ರವ ಪರೀಕ್ಷೆ ನಡೆಯುತ್ತಿತ್ತು. ಮಂಗಳವಾರ 1541 ವ್ಯಕ್ತಿಗಳ ಸ್ವಾಬ್ ಟೆಸ್ಟ್ ನಡೆಸಲಾಗಿತ್ತು. ಇತ್ತೀಚಿನ ತಿಂಗಳಲ್ಲಿ ಇದೇ ಮೊದಲ ಬಾರಿಗೆ ಶೂನ್ಯ ಪ್ರಕರಣ ದಾಖಲಾಗಿದೆ.

ಎರಡು ಮತ್ತು ಮೂರನೇ ಅಲೆಯ ಅಬ್ಬರ ಕಂಡಿದ್ದ ಉಡುಪಿಯ ಜನರಿಗೆ ಇದು ಸ್ವಲ್ಪ ನೆಮ್ಮದಿ ನೀಡುವ ವಿಚಾರ. ಜನವರಿಯಿಂದ ಮೊದಲ್ಗೊಂಡು ಈವರೆಗೆ 2,03,065 ವ್ಯಕ್ತಿಗಳ ಗಂಟಲ ದ್ರವ ಪರೀಕ್ಷೆ ನಡೆಸಲಾಗಿದ್ದು, 18,421 ಜನರಲ್ಲಿ ಕೊರೊನಾ ಪತ್ತೆಯಾಗಿತ್ತು. ಈ ಪೈಕಿ 53 ಮಂದಿ ಮೂರನೇ ಅಲೆಯಲ್ಲಿ ಕೊರೊನಾಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಸದ್ಯ 36 ಸಕ್ರಿಯ ಪ್ರಕರಣಗಳಿವೆ.

Edited By : Nirmala Aralikatti
Kshetra Samachara

Kshetra Samachara

09/03/2022 06:02 pm

Cinque Terre

12.28 K

Cinque Terre

1

ಸಂಬಂಧಿತ ಸುದ್ದಿ