ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರೋಟರಿ ಕ್ಲಬ್ ನಿಂದ ಮಹಿಳಾ ಸ್ವಾಸ್ಥ್ಯಕ್ಕೆ ಮೊಬೈಲ್ ಬಸ್: ಕ್ಯಾನ್ಸರ್ ಪತ್ತೆಗೆ 1.25 ಕೋಟಿ ರೂ. ವೆಚ್ಚದ ಕೊಡುಗೆ

ಮಂಗಳೂರು: ಮಹಿಳೆಯರನ್ನು ಕಾಡುವ ಕ್ಯಾನ್ಸರ್ ರೋಗವನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ 1.25 ಕೋಟಿ ರೂ. ವೆಚ್ಚದ ಮೊಬೈಲ್ ಬಸ್​ 'ಮಹಿಳಾ ಆರೋಗ್ಯ ಸಂಚಾರಿ ಚಿಕಿತ್ಸಾ ಘಟಕ'ವನ್ನು ದ.ಕ.ಜಿಲ್ಲೆಗೆ ಕೊಡುಗೆಯಾಗಿ ನೀಡಿದೆ. ಇಂದು ಈ ಮೊಬೈಲ್ ಕ್ಲಿನಿಕ್ ಬಸ್​ಗೆ ಲೋಕಾರ್ಪಣೆಗೊಳ್ಳಲಿದೆ.

ರೋಟರಿ ಕ್ಲಬ್ ಮಂಗಳೂರು, ರೋಟರಿ ಕ್ಲಬ್ ಸಿಕಿಕಾನ್ ವ್ಯಾಲಿ (ಅಮೆರಿಕ), ರೋಟರಿ ಡಿಸ್ಟ್ರಿಕ್ಟ್ 6540 (ಅಮೆರಿಕ) ಹಾಗೂ ರೋಟರಿ ಡಿಸ್ಟ್ರಿಕ್ಟ್ (3181) ಈ ಮೊಬೈಲ್ ಕ್ಲಿನಿಕ್ ಬಸ್ ಅನ್ನು ಕೊಡುಗೆಯಾಗಿ ನೀಡಿದೆ. ಈ ಬಸ್ ಅನ್ನು ನಗರದ ಪ್ರತಿಷ್ಠಿತ ಯೆನೆಪೊಯ ಆಸ್ಪತ್ರೆ ನಿರ್ವಹಣೆ ಮಾಡಲಿದ್ದು, ಜಿಲ್ಲೆಯ ಹಳ್ಳಿ ಹಳ್ಳಿಗೂ ತೆರಳುವ ಈ ಬಸ್, ಮಹಿಳೆಯರಿಗೆ ಮಾಡುವ ಎಲ್ಲ ತಪಾಸಣೆ ಹಾಗೂ ಚಿಕಿತ್ಸೆಗಳನ್ನು ಉಚಿತವಾಗಿ ನೀಡುತ್ತದೆ. ಈ ಮೊಬೈಲ್ ಕ್ಲಿನಿಕ್ ಬಸ್​, ಸ್ತನ ಕ್ಯಾನ್ಸರ್ ಪತ್ತೆಗಾಗಿ ಮ್ಯಾಮೊಗ್ರಾಫಿ ಯಂತ್ರ, ಸೆರ್ವಿಕಲ್ ಕ್ಯಾನ್ಸರ್ ಪತ್ತೆಗಾಗಿ ಕೊಲ್ಪೊಸ್ಕೋಪಿ ಯಂತ್ರ ಮುಂತಾದ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸಕ ಘಟಕಗಳನ್ನು ಹೊಂದಿದೆ. ಜೊತೆಗೆ ಹೈಟೆಕ್ ಶೌಚಗೃಹ ವ್ಯವಸ್ಥೆಯನ್ನು ಒಳಗೊಂಡಿದೆ. ಅಲ್ಲದೆ ಮಹಿಳಾ ನುರಿತ ವೈದ್ಯರು ಹಾಗೂ ದಾದಿಯರನ್ನು ಒಳಗೊಂಡಿದೆ.

ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವವರನ್ನು ಗುರಿಯಾಗಿಸಿಕೊಂಡು ಈ ಮೊಬೈಲ್ ಬಸ್ ಸೇವೆ ನೀಡಲಾಗಿದೆ.‌ ನಿರ್ದಿಷ್ಟ ವಯಸ್ಸಿನ ಬಳಿಕ ಮಹಿಳೆಯರು ಕೆಲವೊಂದು ವೈದ್ಯಕೀಯ ತಪಾಸಣೆಗೆ ಅಗತ್ಯ ಒಳಗಾಗಬೇಕಾಗುತ್ತದೆ. ಈ ರೀತಿಯಲ್ಲಿ ಮಹಿಳೆಯರ ಮನವೊಲಿಕೆ ಮಾಡಿ, ಅವರನ್ನು ಕೌನ್ಸಲಿಂಗ್​ಗೆ ಒಳಪಡಿಸಲಾಗುತ್ತದೆ. ಬಳಿಕ ಯಾರಿಗೆ ತಪಾಸಣೆ ಅಗತ್ಯವಿದೆಯೋ ಅವರಿಗೆ ರಿಜಿಸ್ಟ್ರೇಷನ್ ಮಾಡಿಕೊಂಡು, ಮೊಬೈಲ್ ಬಸ್ ಮೂಲಕ ಉಚಿತವಾಗಿ ತಪಾಸಣೆ ಮಾಡಿಸಲಾಗುತ್ತದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದವರಿಗೆ ಯೆನೆಪೊಯ ಆಸ್ಪತ್ರೆಯ ಮೂಲಕ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿಸಲಾಗುತ್ತದೆ.

Edited By : Shivu K
Kshetra Samachara

Kshetra Samachara

05/01/2022 06:26 pm

Cinque Terre

13.74 K

Cinque Terre

0