ಮುಲ್ಕಿ: ಹೆಜಮಾಡಿ ಸರ್ಫಿಂಗ್ ಪಾಯಿಂಟ್‌ಗೆ ವಿದೇಶೀಯರ ಸಹಿತ ಹೊರರಾಜ್ಯ ಹಾಗೂ ಕರ್ನಾಟಕದ ವಿವಿಧ ಭಾಗದಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಪ್ರತಿ ಮಳೆಗಾಲದ ಬಳಿಕ ಈ ಭಾಗದಲ್ಲಿ ನೂರಾರು ಟನ್‌ಗಳಷ್ಟು ತ್ಯಾಜ್ಯಗಳು ಸಂಗ್ರಹಗೊಳ್ಳುತ್ತಿದೆ. ಆಳ್ವಾಸ್ ಸಂಸ್ಥೆ ಇಲ್ಲಿನ ಎಲ್ಲಾ ತ್ಯಾಜ್ಯಗಳನ್ನು ಹೊರಹಾಕಲು ನಿರ್ಧರಿಸಿ ಮುಂದೆ ಸಂಪೂರ್ಣ ತ್ಯಾಜ್ಯ ತೆಗೆಯುವ ತನಕ ಪ್ರತಿ ಭಾನುವಾರ ಬೀಚ್ ಸ್ವಚ್ಛ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಆಳ್ವಾಸ್ ಶೈಕ್ಷಣಿಕ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟೀ ವಿವೇಕ್ ಆಳ್ವ ಹೇಳಿದ್ದಾರೆ.
ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ, ಮುಲ್ಕಿಯ ಮಂತ್ರ ಸರ್ಫಿಂಗ್ ಕ್ಲಬ್ ಮತ್ತು ಸರ್ಫಿಂಗ್ ಸ್ವಾಮಿ ಫೌಂಡೇಶನ್ ವತಿಯಿಂದ ಭಾನುವಾರ ಮುಲ್ಕಿ ಶಾಂಭವಿ-ನಂದಿನಿ ನದಿಯ ಸಮುದ್ರ ಸೇರುವ ಅಳಿವೆ ಬಾಗಿಲಿನ ಹೆಜಮಾಡಿ ಭಾಗದ ಸರ್ಫಿಂಗ್ ಪಾಯಿಂಟ್ ವ್ಯಾಪ್ತಿಯಲ್ಲಿ ಬೀಚ್ ಕ್ಲೀನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೀಚ್ ಕ್ಲೀನಿಂಗ್ ಸಂದರ್ಭದಲ್ಲಿ ಸರ್ಫಿಂಗ್ ಸ್ವಾಮಿ ಫೌಂಡೇಶನ್ ಟ್ರಸ್ಟೀ ಗೌರವ್ ಹೆಗ್ಡೆ, ಮಂತ್ರ ಸರ್ಫಿಂಗ್ ಕ್ಲಬ್‌ನ ಮ್ಯಾನೇಜರ್ ಕಿರಣ್ ಕುಮಾರ್, ಶಮಂತ್ ಕುಮಾರ್, ಸರ್ಫಿಂಗ್ ಸ್ವಾಮಿ ಫೌಂಡೇಶನ್‌ನ ಮಧುಕರ್ ಕುಡ್ವ, ಆಳ್ವಾಸ್ ಸಂಸ್ಥೆಯ ಮೂಸಾ ಶರೀಫ್, ಅಕ್ಷಯ್ ಜೈನ್, ರಾಮ ಜೈನ್, ದೀಪಕ್ ಇದ್ದರು.
Kshetra Samachara
07/11/2021 10:11 pm