ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉದ್ಯಾವರ: ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದಲ್ಲಿ ರಕ್ತದಾನ ಶಿಬಿರ

ಉದ್ಯಾವರ: ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಝೇವಿಯರ್ ಸಭಾಭವನದಲ್ಲಿ ಆರೋಗ್ಯ ಆಯೋಗ ಇವರ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್, ಐಸಿವೈಎಂ, ಕಥೋಲಿಕ್ ಸಭಾ ಉದ್ಯಾವರ, ಅಭಯಹಸ್ತ ಉಡುಪಿ ಮತ್ತು ಗುಡ್ಡೆಯಂಗಡಿ ಫ್ರೆಂಡ್ಸ್ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ್ ಸಾಲ್ಯಾನ್ ಮಣಿಪಾಲ್, ರಕ್ತದಾನ ಅತ್ಯಂತ ಶ್ರೇಷ್ಠ ದಾನ. ರಕ್ತಕ್ಕೆ ಜಾತಿ ಇಲ್ಲ. ಯಾವುದೇ ರೋಗಿಗೆ ಅಗತ್ಯವಾಗಿ ರಕ್ತ ಬೇಕಾದಾಗ ಅವನ ಜಾತಿ ನೋಡಿ ರಕ್ತ ನೀಡಲಾಗುವುದಿಲ್ಲ. ರಕ್ತ ದಾನ ಮಾಡಿದ ಶ್ರೇಷ್ಠ ದಾನಿಯಿಂದ ರೋಗಿಯ ಜೀವ ಉಳಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ಕುಲಪತಿ, ಸ್ಥಳೀಯ ದೇವಾಲಯದ ಪ್ರಧಾನ ಧರ್ಮಗುರು ಅ. ವಂ. ಸ್ಟ್ಯಾನಿ ಬಿ ಲೋಬೊ, ಲಯನ್ಸ್ ಜಿಲ್ಲಾ ಗವರ್ನರ್ ಲ. ಎಂಜೆಎಫ್ ವಿಶ್ವನಾಥ ಶೆಟ್ಟಿ, ಕೆಎಂಸಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ದೀಪಿಕಾ, ಪಾಲನಾ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ನೊರೊನ್ಹಾ, ಆರೋಗ್ಯ ಆಯೋಗದ ಸಂಚಾಲಕ ಆರ್ ಪಿ ಮೋನಿಸ್, ಐಸಿವೈಎಂ ಅಧ್ಯಕ್ಷ ಪ್ರೀತೇಶ್ ಪಿಂಟೊ, ಲ. ವೀರಭದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ಲ. ಗೋಡ್ಫ್ರೀ ಡಿಸೋಜ ಸ್ವಾಗತಿಸಿದರೆ, ಕಥೋಲಿಕ್ ಸಭಾ ಕಾರ್ಯದರ್ಶಿ ಟೆರೆನ್ಸ್ ವಂದಿಸಿದರು. ಐಸಿವೈಎಂ ಸದಸ್ಯೆ ಪ್ರತೀಕ್ಷಾ ಗೋಮ್ಸ್ ಕಾರ್ಯಕ್ರಮ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

05/10/2021 01:17 pm

Cinque Terre

20.11 K

Cinque Terre

1

ಸಂಬಂಧಿತ ಸುದ್ದಿ