ಮುಲ್ಕಿ: ವಿಜಯ ಮಾಸ್ಟರ್ ಟ್ರಸ್ಟ್, ಭಾರತದ ಚರ್ಚ್ ಗಳ ಒಕ್ಕೂಟ ಮಂಗಳೂರು, ಮೈಮೂನ ಫೌಂಡೇಶನ್ ಸೈಕೋ ರಿಹಾಬಿಲಿಟೇಶನ್ ಸೆಂಟರ್ ಕಾರ್ನಾಡ್, ಮುಲ್ಕಿ ಆಶ್ರಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮ ದಿನ ಪ್ರಯುಕ್ತ ಕಾನೂನು ಹಾಗೂ ಆರೋಗ್ಯ ಮಾಹಿತಿ ಶಿಬಿರ ಕಾರ್ನಾಡಿನ ಆಪತ್ಬಾಂಧವ ಸೆಂಟರ್ ನಲ್ಲಿ ನಡೆಯಿತು.
ಕಾರ್ನಾಡಿನ ಮೈಮುನಾ ಫೌಂಡೇಶನ್ ನಿರ್ದೇಶಕ ಆಸಿಫ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟ ಅಧ್ಯಕ್ಷರಾದ ಡೇನಿಯಲ್ ದೇವರಾಜ್ ವಹಿಸಿ ಮಾತನಾಡಿ, ಸಮಾಜದಲ್ಲಿ ನಿಸ್ಸಾಯಕರ, ಅಪಾಯದಲ್ಲಿರುವ ವ್ಯಕ್ತಿಗಳ ರಕ್ಷಣೆ ಮಾಡುತ್ತಿರುವ ಆಪತ್ಬಾಂಧವ ಆಸಿಫ್ ಅವರ ಕಾರ್ಯವೈಖರಿ ಶ್ಲಾಘಿಸಿದರು. ಮುಖ್ಯ ಅತಿಥಿಗಳಾಗಿ ಸುರತ್ಕಲ್ ಕೃಷ್ಣಾಪುರ ಸಿಎಸ್ಐ ಚರ್ಚ್ ನ ಸಭಾ ಪಾಲಕರಾದ ರೆ.ಐಸನ್ ಪಾಲನ್ನ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಮುಕ್ಕ ಶ್ರೀನಿವಾಸ್ ಕಾಲೇಜಿನ ಮನೋವಿಜ್ಞಾನ ವಿಭಾಗದ ಡಾ. ಮಿಥುನ್ ಅವರು, ಮಾನಸಿಕ ಸ್ಥೈರ್ಯ ಹಾಗೂ ಆರೋಗ್ಯ ಮಾಹಿತಿ ನೀಡಿದರು.
ಎಸ್ ಡಿಎಂ ಲಾ ಕಾಲೇಜಿನ ನಿಯಾಜ್ ಅವರು, ಮೂಲಭೂತ ಹಕ್ಕು- ಕರ್ತವ್ಯಗಳ ಬಗ್ಗೆ ತಿಳಿಸಿದರು. ಬಳಿಕ ಕಾರ್ನಾಡು ಮೈಮುನಾ ಫೌಂಡೇಶನ್ ನ ವಿಶೇಷ ಅತಿಥಿಗಳ ಸಮಸ್ಯೆಗಳ ಬಗ್ಗೆ "ಕಾನೂನು ಮತ್ತು ಆರೋಗ್ಯ ಮಾಹಿತಿ ಶಿಬಿರ" ನಡೆಯಿತು. ಶಿಬಿರಾರ್ಥಿಗಳಿಗೆ ಹಣ್ಣುಹಂಪಲು, ಊಟ ನೀಡಲಾಯಿತು. ಕ್ರೈಸ್ತ ಚರ್ಚ್ ಗಳ ಒಕ್ಕೂಟ ಅಧ್ಯಕ್ಷ ಡೇನಿಯಲ್ ದೇವರಾಜ್ ಸ್ವಾಗತಿಸಿದರು. ವಕೀಲ ಲಾಯ್ಡ್ ವಂದಿಸಿದರು.
Kshetra Samachara
19/09/2020 06:03 pm