ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಕೊರೊನಾ ವಾರಿಯರ್ಸ್ ಮಕ್ಕಳಿಗೆ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಮೀಸಲು: ಸರಕಾರಕ್ಕೆ ಶಾಸಕ ರಘುಪತಿ ಭಟ್ ಪತ್ರ

ಉಡುಪಿ: ಕೊರೊನಾ ವಾರಿಯರ್ಸ್ ಮಕ್ಕಳಿಗೆ ಮೆಡಿಕಲ್ ಕಾಲೇಜುಗಳಲ್ಲಿ ವಿಶೇಷ ಕೋಟಾದಡಿ ಸೀಟು ಮೀಸಲಿಡಬೇಕು ಎಂದು ಶಾಸಕ ರಘುಪತಿ ಭಟ್ ಸರಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು "ಕಳೆದ ಸುಮಾರು 6 ತಿಂಗಳುಗಳಿಂದ ಕೋವಿಡ್ ನಿಗ್ರಹದಲ್ಲಿ ಆರೋಗ್ಯ ಕಾರ್ಯಕರ್ತರು, ದಾದಿಗಳು, ಆಶಾ ಕಾರ್ಯಕರ್ತರು, ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದು, ಹಗಲಿರುಳು ದುಡಿಯುತಿದ್ದಾರೆ. ಕೆಲವೊಂದು ಸಂದರ್ಭ ತಮ್ಮ ಮಕ್ಕಳ ಶಿಕ್ಷಣದ ಕಡೆಗೆ ಕೂಡಾ ಅವರು ಗಮನ ನೀಡಲಾಗುತಿಲ್ಲ. ಹಲವರು ಕೋವಿಡ್ ಸಂದರ್ಭ ತಮ್ಮ ಕರ್ತವ್ಯ ನಿರ್ವಹಿಸಿ ಮರಣವನ್ನಪ್ಪಿದ್ದಾರೆ.

ಈ ವಾರಿಯರ್ಸ್ ಮಕ್ಕಳಿಗೆ ಮೆಡಿಕಲ್ ಕಾಲೇಜುಗಳ ಸೀಟ್ ಮ್ಯಾಟ್ರಿಕ್ಸ್ ನಲ್ಲಿ ನಿರ್ದಿಷ್ಟ ಪ್ರಮಾಣದ ಸೀಟುಗಳನ್ನು ಮೀಸಲಿಡಬೇಕು" ಎಂದು ರಘುಪತಿ ಭಟ್ ಸರಕಾರಕ್ಕೆ ಆಗ್ರಹಿಸಿದ್ದಾರೆ.

Edited By :
Kshetra Samachara

Kshetra Samachara

16/10/2020 12:08 pm

Cinque Terre

37.4 K

Cinque Terre

7