ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: 'ಮಾನಸಿಕ‌ ಆರೋಗ್ಯ ದೇಶದ‌ ಅಭಿವೃದ್ಧಿಯಲ್ಲಿ ಮಹತ್ತರ‌ ಪಾತ್ರ‌ ವಹಿಸುತ್ತಿದೆ'; ನ್ಯಾಯಾಧೀಶೆ‌ ಶರ್ಮಿಳಾ ಎಸ್

ಉಡುಪಿ: ಜಗತ್ತಿನ 149 ರಾಷ್ಟ್ರಗಳಲ್ಲಿ ನಡೆಸಿದ ನೆಮ್ಮದಿಯ ಸಮೀಕ್ಷೆಯಲ್ಲಿ ಭಾರತ 139ನೇ‌ ಸ್ಥಾನ ಪಡೆದಿದೆ ಎಂದು ಸಿವಿಲ್ ನ್ಯಾಯಾಧೀಶೆ‌ ಶರ್ಮಿಳಾ ಎಸ್. ಹೇಳಿದ್ದಾರೆ.

ಅವರು ಕಮಲಾ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಭಾರತೀಯ ಮನೋವೈದ್ಯಕೀಯ ಸಂಘ - ದಕ್ಷಿಣ ವಲಯ ಸಹಯೋಗದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಉದ್ಘಾಟಿಸಿ‌ ಮಾತನಾಡಿದರು. ಮಾನಸಿಕ‌ ಆರೋಗ್ಯ, ನೆಮ್ಮದಿಯು ದೇಶದ‌ ಆರ್ಥಿಕತೆ, ಅಭಿವೃದ್ಧಿಯಲ್ಲಿ ಮಹತ್ತರ‌ ಪಾತ್ರ‌ ವಹಿಸುತ್ತಿದೆ.

ಮಾನಸಿಕ ಸಮಸ್ಯೆಯಾಗದಂತೆ‌ ವಿವಿಧ ಕೆಲಸ, ಹವ್ಯಾಸಗಳಲ್ಲಿ ತೊಡಗಿಕೊಳ್ಳಿ. ಕೋವಿಡ್ ಮಾನಸಿಕ, ದೈಹಿಕ ಪರಿಣಾಮ ಬೀರಿದೆ. 19 ರಿಂದ‌ 20 ವಯಸ್ಸಿನವರಲ್ಲಿ ಖಿನ್ನತೆ, ಆತ್ಮಹತ್ಯೆ ಪ್ರಕರಣ ಹೆಚ್ಚಿದೆ. ದೈಹಿಕ,ಮಾನಸಿಕ ಆರೋಗ್ಯ, ಸಮತೋಲನ ಮುಖ್ಯ ಎಂದರು.

ಉಡುಪಿ ಜಿಲ್ಲಾ‌ ಆರೋಗ್ಯ ಮತ್ತು ಕುಟುಂಬ‌ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಐಎಂಎ ಉಡುಪಿ ಕರಾವಳಿ ನೂತನ ಅಧ್ಯಕ್ಷ‌ ಡಾ.ಪಿ.ವಿ. ಭಂಡಾರಿ, ಡಾ.ಲತಾ ನಾಯಕ್, ಐಎಂಎ ಉಡುಪಿ ಕರಾವಳಿ ನಿಕಟಪೂರ್ವ ಅಧ್ಯಕ್ಷ ಡಾ.ವಿನಾಯಕ‌ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

10/10/2022 07:09 pm

Cinque Terre

4.77 K

Cinque Terre

0