ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಜಿಲ್ಲೆಯಲ್ಲಿ ಒಟ್ಟು 1293 ಮಂದಿ ಮಕ್ಕಳು,ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು!

ಉಡುಪಿ: ಜಿಲ್ಲೆಯಲ್ಲಿ ನಿನ್ನೆತನಕ ಒಟ್ಟು 1293 ಮಂದಿ ಮಕ್ಕಳು ಹಾಗೂ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದ್ದಾಗಿ ಆರೋಗ್ಯ ಇಲಾಖೆ ಮೂಲಗಳು ಮಾಹಿತಿ ನೀಡಿವೆ. ಜನವರಿ ತಿಂಗಳಲ್ಲಿ 0-5 ವರ್ಷದೊಳಗಿನ ಒಟ್ಟು 20 ಮಕ್ಕಳಲ್ಲಿ, 5 ರಿಂದ 10 ವರ್ಷದೊಳಗಿನ 72, 10 ರಿಂದ 15ವರ್ಷದೊಳಗಿನ 256, 15ರಿಂದ 20 ವರ್ಷದೊಳಗಿನ 473 ಹಾಗೂ 21 ರಿಂದ 25 ವರ್ಷದೊಳಗಿನ 472 ಮಂದಿ ವಿದ್ಯಾರ್ಥಿಗಳಲ್ಲಿ ಕೊರೊನಾ ಪತ್ತೆಯಾಗಿದೆ. ವಿದ್ಯಾರ್ಥಿಗಳಲ್ಲಿ ವೈದ್ಯಕೀಯ, ಇಂಜಿನಿಯರಿಂಗ್, ನರ್ಸಿಂಗ್, ಫಾರ್ಮಸಿ ಸೇರಿದಂತೆ ವಿವಿಧ ಪದವಿ ತರಗತಿಗಳಲ್ಲಿ ಓದುತ್ತಿರುವವರು, ಪದವಿ ಪೂರ್ವ ಕಾಲೇಜು, ಹೈಸ್ಕೂಲ್, ಪ್ರಾಥಮಿಕ ಶಾಲೆಗಳಲ್ಲಿ ಕಲಿಯುತ್ತಿರುವ ಪುಟಾಣಿ ಮಕ್ಕಳೂ ಸೇರಿದ್ದಾರೆ.

ಜಿಲ್ಲೆಯಲ್ಲಿ 11 ಕಂಟೈನ್‌ಮೆಂಟ್ ಝೋನ್:

ಜಿಲ್ಲೆಯಲ್ಲಿ ನಿನ್ನೆವರೆಗೆ ಒಟ್ಟು 11 ಕಂಟೈನ್‌ ಮೆಂಟ್ ಝೋನ್‌ ಮಾಡಲಾಗಿದೆ‌.ಎರಡು ಕಾರ್ಕಳ ತಾಲೂಕಿನಲ್ಲಿ, ಒಂದು ಬ್ರಹ್ಮಾವರ ತಾಲೂಕಿನಲ್ಲಿ ಹಾಗೂ ಉಳಿದ ಎಂಟು ಮಣಿಪಾಲ ಆಸುಪಾಸಿನಲ್ಲಿವೆ. ಇವುಗಳಲ್ಲಿ ಮೂರು ಮಣಿಪಾಲದ ವಸತಿ ಸಂಕೀರ್ಣಗಳು ಸೇರಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Edited By :
Kshetra Samachara

Kshetra Samachara

14/01/2022 12:17 pm

Cinque Terre

12.77 K

Cinque Terre

1

ಸಂಬಂಧಿತ ಸುದ್ದಿ