ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನೈಟ್ ಕರ್ಫ್ಯೂ ಉಲ್ಲಂಘನೆ- ಕಾಪುವಿನಲ್ಲಿ ಹಲವರ ವಿರುದ್ಧ ದೂರು ದಾಖಲು

ಶಿರ್ವ: ಶಿರ್ವ ಗ್ರಾಮದ ಸ್ಯಾಮ್ ಸ್ಕ್ವಾರ್ ಕಟ್ಟಡದ ಬಳಿ ಜ.3 ರಂದು ನಸುಕಿನ ವೇಳೆ ನೈಟ್ ಕರ್ಫ್ಯೂ ಆದೇಶವನ್ನು ಉಲ್ಲಂಘಿಸಿ ಅನಗತ್ಯವಾಗಿ ವಾಹನದಲ್ಲಿ ಬಂದು ಸ್ಥಳದಲ್ಲಿ ಗುಂಪು ಸೇರಿದ ವಿಚಾರವಾಗಿ ಕಾಪು ಪೊಲೀಸರು ಹಲವು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಿಕ್ಷಾ ಹಾಗೂ ಸ್ಕೂಟರಿನಲ್ಲಿದ್ದ ಅಸ್ಟನ್ (29), ರಝೀನ್ (29), ಸೋಮನಾಥ (35), ಅಬ್ದುಲ್ ಸಮಾದ್ (29), ಪ್ರಶಾಂತ್(32), ನವೀನ್ ಕುಮಾರ್, ಜೀವನ್(24), ಮುನಾಸ್(28) ಎಂಬವರು ಮಾಸ್ಕ್‌ ಧರಿಸದೇ ಗುಂಪು ಸೇರಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

Edited By : Vijay Kumar
Kshetra Samachara

Kshetra Samachara

05/01/2022 05:18 pm

Cinque Terre

9 K

Cinque Terre

0

ಸಂಬಂಧಿತ ಸುದ್ದಿ