ಉಡುಪಿ; ಇವತ್ತು ಉಡುಪಿಯಲ್ಲಿ ಮಕ್ಕಳ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.ಮೂರ್ನಾಲ್ಕು ದಿನಗಳ ಕಾಲ ಈ ವ್ಯಾಕ್ಸಿನ್ ಡ್ರೈವ್ ನಡೆಯಲಿದ್ದು ಆರೋಗ್ಯ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.
ಇವತ್ತು ಲಸಿಕೆ ಅಭಿಯಾನಕ್ಕೆ ನಿಟ್ಡೂರು ಹೈಸ್ಕೂಲಲ್ಲಿ ಚಾಲನೆ ನೀಡಿದ ಶಾಸಕ ರಘುಪತಿ ಭಟ್ ,ಜಿಲ್ಲೆಯಲ್ಲಿ 15 ವರ್ಷದ ಸುಮಾರು ಅರವತ್ತು ಸಾವಿರದಷ್ಟು ಮಕ್ಕಳಿದ್ದಾರೆ.ಅವರೆಲ್ಲರಿಗೂ ಲಸಿಕೆ ನೀಡಲಾಗುತ್ತಿದೆ.ಪ್ರತಿದಿನ ಹದಿನೇಳು ಸಾವಿರದಷ್ಟು ಮಕ್ಕಳಿಗೆ ಲಸಿಕೆ ನೀಡುವ ಯೋಜನೆಯನ್ನು ಆರೋಗ್ಯ ಇಲಾಖೆ ಹಾಕಿಕೊಂಡಿದೆ.ಹಿರಿಯರ ರೀತಿಯಲ್ಲೇ ಮಕ್ಕಳೂ ಕೂಡ ಇದಕ್ಕೆ ಸಹಕಾರ ನೀಡುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
Kshetra Samachara
03/01/2022 12:29 pm