ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೋವಿಡ್ 3ನೇ ಅಲೆ ಎದುರಾದರೂ ಸಮರ್ಥವಾಗಿ ನಿಭಾಯಿಸಲು ಸಿದ್ಧತೆ; ನಳಿನ್

ಮಂಗಳೂರು: ಕೋವಿಡ್ ಸೋಂಕಿನ ಮೂರನೇ ಅಲೆ ಎದುರಾದರೂ ದ.ಕ. ಜಿಲ್ಲೆಯಲ್ಲಿ ಅದನ್ನು ಸಮರ್ಥವಾಗಿ ನಿಭಾಯಿಸಲು ಅಗತ್ಯ ರೀತಿಯ ವೈದ್ಯಕೀಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ನಗರದ ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿ ಪ್ರತಿ ನಿಮಿಷಕ್ಕೆ 1 ಸಾವಿರ ಲೀ. ಹಾಗೂ 930 ಲೀ. ಆಮ್ಲಜನಕ ಉತ್ಪಾದನೆ ಘಟಕಗಳನ್ನು ಇಂದು ಲೋಕಾರ್ಪಣೆ ಮಾಡಿದ ಅವರು ಆ ಬಳಿಕ ಮಾತನಾಡಿ, ವೆನ್‍ಲಾಕ್, ಲೇಡಿಗೋಷನ್ ಆಸ್ಪತ್ರೆ ಸೇರಿದಂತೆ ಎಲ್ಲ ತಾಲೂಕುಗಳ ಆಸ್ಪತ್ರೆಗಳು, ಸಮುದಾಯ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್‍ಗಳನ್ನು ಸಿದ್ಧ ಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಕೊಚ್ಚಿನ್ ಹಾಗೂ ಬಳ್ಳಾರಿಯಿಂದ ವೈದ್ಯಕೀಯ ಆಮ್ಲಜನಕದ ಅವಲಂಬನೆಯಿಂದ ಹೊರಬರುವುದು ಸಾಧ್ಯವಾಗಿದೆ ಎಂದರು.

ದ.ಕ.ಜಿಲ್ಲೆಯಲ್ಲಿ ಒಟ್ಟು 16 ಆಮ್ಲಜನಕ ಘಟಕಗಳ ಪೈಕಿ 12 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಉಳಿದವು ಶೀಘ್ರ ಆಮ್ಲಜಕವನ್ನು ಉತ್ಪಾದನೆ ಮಾಡಲು ಆರಂಭಿಸುತ್ತದೆ‌. ಮುಂದಿನ ದಿನಗಳಲ್ಲಿ ಕ್ರೆಡೈನಿಂದ ಇನ್ನೊಂದು ಆಕ್ಸಿಜನ್ ಪ್ಲಾಂಟ್ ವೆನ್ಲಾಕ್‍ ಆಸ್ಪತ್ರೆಗೆ ದೊರೆಯಲಿದೆ. ಅಲ್ಲದೆ ವಿವಿಧ ಕಂಪೆನಿಗಳ ಸಿಎಸ್‍ಆರ್ ನಿಧಿಯಿಂದ ಜಿಲ್ಲಾದ್ಯಂತ ಆಕ್ಸಿಜನ್ ಪ್ಲಾಂಟ್‍ಗಳು ನಿರ್ಮಾಣವಾಗುತ್ತಿದೆ. ಈ ಮೂಲಕ ಖಾಸಗಿ ಆಸ್ಪತ್ರೆಗಿಂತ ಹೆಚ್ಚಿನ ಗುಣಮಟ್ಟದ ಸೌಲಭ್ಯ ಈಗ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಾಗುತ್ತಿದೆ ಎಂದು ನಳಿನ್ ಹೇಳಿದರು.

Edited By : Nagesh Gaonkar
Kshetra Samachara

Kshetra Samachara

07/10/2021 10:53 pm

Cinque Terre

17.13 K

Cinque Terre

7

ಸಂಬಂಧಿತ ಸುದ್ದಿ