ಮಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಲು ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಿರುವ ಕಾರಣ ತಲಪಾಡಿ ಗಡಿಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಭಾರೀ ಜನಸಂದಣಿ ಉಂಟಾಗಿದೆ. ಆರ್ ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳಲು ನೂರಾರು ಜನರು ಸಾಲುಗಟ್ಟಿ ನಿಂತಿರುವ ಕಾರಣ ಫುಲ್ ರಶ್ ಉಂಟಾಗಿದೆ.
ಕರ್ನಾಟಕ ಗಡಿಯಿಂದ ಕೇರಳ ಗಡಿಯವರೆಗೆ ಕೇರಳದಿಂದ ಬಂದ ಜನರು ಸಾಲುಗಟ್ಟಿ ನಿಂತಿದ್ದು, ಬಸ್ ಮತ್ತು ಸ್ವಂತ ವಾಹನಗಳಲ್ಲಿ ನೆಗೆಟಿವ್ ರಿಪೋರ್ಟ್ ತರದೇ ಪ್ರಯಾಣಿಕರು ಬಂದಿದ್ದಾರೆ. ಹೀಗಾಗಿ ಗಡಿಯಲ್ಲೇ ಸ್ವ್ಯಾಬ್ ಕೊಟ್ಟು ಕೇರಳ ಭಾಗದ ಜನರು ಮಂಗಳೂರಿಗೆ ಬರುತ್ತಿದ್ದಾರೆ.
ತಲಪಾಡಿ ಗಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆಯಿಂದ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ಸಾಲಿನಲ್ಲಿ ನಿಂತು ಉದ್ಯೋಗಿಗಳು, ವ್ಯಾಪಾರಿಗಳು ಮತ್ತು ವಿದ್ಯಾರ್ಥಿಗಳು ಟೆಸ್ಟಿಂಗ್ ಮಾಡಿಸಿಕೊಳ್ಳುತ್ತಿದ್ದಾರೆ.
ಕೇರಳದಲ್ಲಿ ಸೋಂಕು ಜಾಸ್ತಿಯಾಗಿದ್ದ ಕಾರಣ ಎರಡು ಡೋಸ್ ಪಡೆದಿದ್ದರೂ ಕರ್ನಾಟಕ ಪ್ರವೇಶಕ್ಕೆ 72 ಗಂಟೆಗಳ ಕೋವಿಡ್ ನೆಗೆಟಿವ್ ರಿಪೋರ್ಟ್ ಅನ್ನು ಕರ್ನಾಟಕ ಸರ್ಕಾರ ಕಡ್ಡಾಯಗೊಳಿಸಿತ್ತು
Kshetra Samachara
02/08/2021 02:11 pm