ಉಡುಪಿ : ಜಿಲ್ಲಾ ಪ್ರವಾಸೋದ್ಯಮ ಪ್ರಚಾರದ ಅಂಗವಾಗಿ ನವೆಂಬರ್ 7 ರಿಂದ 9ರ ತನಕ ಉಡುಪಿಯಲ್ಲಿ 'ಉಡುಪಿ ಟ್ಯೂರಿಸಂ ಕನೆಕ್ಟ್ 2022 ' ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಆಫ್ ಕೋಸ್ಟಲ್ ಟೂರಿಸಮ್‌ನ ಸಂಚಾಲಕ ಮರವಂತೆ ನಾಗರಾಜ್ ಹೆಬ್ಬಾರ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು , ದೇಶದ ವಿವಿಧ ಭಾಗಗಳಿಂದ ಆಯ್ದ ಸುಮಾರು 60 ಮಂದಿ ಟ್ರಾವೆಲ್ ಏಜೆಂಟರು, ಬ್ಲಾಗ್ ಬರಹಗಾರರು, ಇವೆಂಟ್ ಸಂಯೋಜಕರು, ಮೈಸ್ (MICE) ಸಂಯೋಜಕರು, ಪ್ರವಾಸೋದ್ಯಮ ಮಾಧ್ಯಮ ಸಲಹೆಗಾರರು, ಪತ್ರಿಕೋದ್ಯಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇವರೆಲ್ಲರಿಗೂ ಉಡುಪಿ ಜಿಲ್ಲೆಯ ಸಮಗ್ರ ಪರಿಚಯ ಮಾಡಿಸುತ್ತೇವೆ.ಈ ಶೃಂಗಸಭೆಯ ಅಂಗವಾಗಿ ನವೆಂಬರ್ 8ರಂದು ಒಂದು ದಿನದ ಕಾರ್ಯಕ್ರಮವನ್ನು ಉಡುಪಿಯ ಹೋಟೆಲ್ ಕಿದಿಯೂರ್‌ನಲ್ಲಿ ಹಮ್ಮಿಕೊಂಡಿದ್ದೇವೆ. ಸರ್ಕಾರೇತರ ಸಂಸ್ಥೆಯು ಜಿಲ್ಲೆಯ ಪ್ರವಾಸೋದ್ಯಮವನ್ನು ಯಾವ ರೀತಿ ಅಭಿವೃದ್ಧಿಪಡಿಸಬಹುದು ,ಮುಂದೆ ಹಾಕಿಕೊಳ್ಳಬೇಕಾದ ಯೋಜನೆಗಳು ,ಪ್ರವಾಸಿಗರಿಗೆ ಕಲ್ಪಿಸಬಹುದಾದ ಅನುಕೂಲತೆಗಳ ಬಗ್ಗೆ ಇದರಲ್ಲಿ ಚರ್ಚಿಸಲಿದ್ದೇವೆ ಎಂದು ಹೇಳಿದರು.
PublicNext
08/10/2022 05:35 pm