ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಗುಜ್ಜಾಡಿ ಗ್ರಾಮ ಪಂಚಾಯಿತಿಗೆ ತಾಲೂಕು ಪಂಚಾಯತ್ EO ದಿಢೀರ್ ಭೇಟಿ

ಬೈಂದೂರು ವಿಧಾನಸಭಾ ಕ್ಷೇತ್ರದ ಗುಜ್ಜಾಡಿ ಗ್ರಾಮ ಪಂಚಾಯಿತಿಗೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಗ್ರಾಮಸ್ಥರ ಕುಂದುಕೊರತೆಗಳ ಹವಾಲುಗಳನ್ನು ಸ್ವೀಕರಿಸಲು ಬಂದಿರುವುದಾಗಿ ಹೇಳಿದರು. ಈ ವೇಳೆ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿ ಎನ್ ಆರ್ ಎಲ್ ಎಮ್ ಘಟಕ ಗುಜ್ಜಾಡಿ ಗ್ರಾಮ ಪಂಚಾಯಿತಿಗೆ ಇವಾಗಲೇ ಸರಕಾರದ ಆದೇಶದಂತೆ ಘಟಕಕ್ಕೆ 17.50 ಲಕ್ಷ ಮಂಜೂರಾಗಿದ್ದು ತಕ್ಷಣ ಕಾಮಗಾರಿಯ ಸ್ಥಳ ಪರಿಶೀಲಿಸಿ ಮುಂದಿನ ಕಾರ್ಯಯೋಜನೆ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜು ಪೂಜಾರಿ ಗ್ರಾಮ ಪಂಚಾಯತ್ ಹಿರಿಯ ಸದಸ್ಯ ಹರೀಶ್ ಮೇಸ್ತ ಗ್ರಾಮ ಪಂಚಾಯತ್ ಕಾರ್ಯದರ್ಶಿ ಶಕುಂತಲಾ ಮಾಧವ ಸಿಬಂದಿಗಳು ಹಾಜರಿದ್ದರು.

Edited By :
Kshetra Samachara

Kshetra Samachara

30/09/2022 04:01 pm

Cinque Terre

4.35 K

Cinque Terre

0

ಸಂಬಂಧಿತ ಸುದ್ದಿ