ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು : 'ಪ್ರಾಜೆಕ್ಟ್ ಚೀತಾ' ತಂಡದಲ್ಲಿ ಅರಿವಳಿಕೆ ತಜ್ಞರಾಗಿ ಡಾ‌.ಸನತ್ ಕೃಷ್ಣ ಕಾರ್ಯ ನಿರ್ವಹಣೆ

ಮಂಗಳೂರು: ಆಫ್ರಿಕಾದ ನಮೀಬಿಯಾ ದೇಶದಿಂದ ತರಲಾಗಿರುವ 8 ಚೀತಾಗಳನ್ನು ಪ್ರಧಾನಿ ಮೋದಿಯವರು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾವನಕ್ಕೆ ಬಿಟ್ಟಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ‌. ಆದರೆ ಈ ಚೀತಾಗಳನ್ನು ಯಶಸ್ವಿಯಾಗಿ ಭಾರತಕ್ಕೆ ಕರೆತಂದಿರುವ ತಂಡದಲ್ಲಿ ಏಕೈಕ ಕನ್ನಡಿಗರೊಬ್ಬರು ಕರ್ತವ್ಯ ನಿರ್ವಹಿಸಿದ್ದಾರೆ.

ಹೌದು... ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪ್ರತಿಷ್ಠಿತ ಮುಳಿಯ ಮನೆತನದ ಡಾ.ಸನತ್ ಕೃಷ್ಣ ಮುಳಿಯ ಪ್ರಾಜೆಕ್ಟ್ ಚೀತಾ ತಂಡದಲ್ಲಿ ಕಾರ್ಯನಿರ್ವಹಿಸಿದವರು. ಇವರು ಪ್ರಾಜೆಕ್ಟ್ ಚೀತಾ ತಂಡದ ಪ್ರಮುಖ ವನ್ಯಜೀವಿ ಅರಿವಳಿಕೆ ತಜ್ಞರಾಗಿದ್ದಾರೆ. ದೆಹಲಿಯ ನ್ಯಾಷನಲ್ ಝೂಲಾಜಿಕಲ್ ಪಾರ್ಕ್‌ನ ಅಸಿಸ್ಟೆಂಟ್ ವೆಟರ್ನರಿಯಲ್ಲಿ ಅಧಿಕಾರಿಯಾಗಿರುವ ಡಾ.ಸನತ್ ಕೃಷ್ಣ ಮುಳಿಯ 70 ವರ್ಷಗಳ ಬಳಿಕ ಚೀತಾಗಳನ್ನು ಭಾರತಕ್ಕೆ ಕರೆತರುವ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಈ 8 ಚೀತಾಗಳಿಗೆ ಸಣ್ಣ ಪ್ರಮಾಣದಲ್ಲಿ ಅರಿವಳಿಕೆ ನೀಡಿ ವಿಶೇಷ ವಿಮಾನದಲ್ಲಿ ನಮೀಬಿಯಾದಿಂದ ಕರೆ ತರಲಾಗಿತ್ತು. 16 ಗಂಟೆಗಳ ವಿಮಾನ ಯಾನದಲ್ಲಿ ಶನಿವಾರ ಚೀತಾಗಳು ಭಾರತವನ್ನು ತಲುಪಿದೆ. ಈ ಪ್ರಯಾಣದ ವೇಳೆ ವಿಮಾನದಲ್ಲಿ ಗಂಟೆಗೊಮ್ಮೆ ಚೀತಾಗಳ ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತಿತ್ತು.

ಡಾ.ಸನತ್ ಕೃಷ್ಣ ಮುಳಿಯ ಆನೆಗೆ ರೇಡಿಯೋ ಕಾಲರ್ ಅಳವಡಿಕೆಯಲ್ಲಿ ಪರಿಣತ ತಜ್ಞರೂ ಆಗಿದ್ದಾರೆ. ಇವರು ಕರ್ನಾಟಕದಲ್ಲಿ ನಡೆದ ರಾಷ್ಟ್ರೀಯ ಹುಲಿಗಣತಿ ವೇಳೆಯೂ ಕರ್ತವ್ಯ ನಿರ್ವಹಿಸಿದ್ದರು. ಮುಳಿಯ ಸ್ವರ್ಣೋದ್ಯಮಿ ಮನೆತನದ ಕೃಷ್ಣ ಭಟ್ ಮತ್ತು ಕಾವೇರಿ ದಂಪತಿಯ ಮೊಮ್ಮಗನೂ, ಕೇಶವ ಭಟ್ ಮತ್ತು ಉಷಾ ದಂಪತಿ ಪುತ್ರರೂ ಆದ ಡಾ.ಸನತ್ ಕೃಷ್ಣ‌ ಮುಳಿಯ ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದರು. ಆ ಬಳಿಕ ಬೆಂಗಳೂರು ಹೆಬ್ಬಾಳದ ಪಶುವೈದ್ಯಕೀಯ ವಿವಿಯಲ್ಲಿ ವನ್ಯಜೀವಿ ವಿಭಾಗದಲ್ಲಿ ಐಎಎಸ್ಸಿ ಮತ್ತು ಎಂಪಿಎಸ್‌ಸಿ ವ್ಯಾಸಂಗ ಮಾಡಿದ್ದರು.

Edited By : Nirmala Aralikatti
PublicNext

PublicNext

18/09/2022 01:25 pm

Cinque Terre

27.64 K

Cinque Terre

4

ಸಂಬಂಧಿತ ಸುದ್ದಿ