ಮಂಗಳೂರು: ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ಸಿಗಬೇಕು. ಅಧಿಕೃತ ರಾಜ್ಯ ಭಾಷೆಯೆಂದು ಘೋಷಣೆಯಾಗಬೇಕೆಂಬ ಕೂಗು ಬಹಳಷ್ಟು ಕಾಲಗಳಿಂದ ಕೇಳಿ ಬರುತ್ತಿದೆ. ಇದೀಗ ಸೆಪ್ಟೆಂಬರ್ 2ರಂದು ಪ್ರಧಾನಿ ಮಂಗಳೂರು ಭೇಟಿಯ ವೇಳೆ ತುಳು ಟ್ವೀಟ್ ಅಭಿಯಾನವೊಂದು ನಡೆಯಲಿದೆ.
ಪ್ರಧಾನಿ ಮೋದಿಯವರು ಸೆಪ್ಟೆಂಬರ್ 2ರಂದು ಮಂಗಳೂರಿಗೆ ಭೇಟಿ ನೀಡಿ ಎನ್ಎಂಪಿಟಿಯಲ್ಲಿ ಸಾಗರಮಾಲಾ ಯೋಜನೆಗೆ ಚಾಲನೆ ನೀಡಲಿದ್ದಾರೆ. ಆ ಬಳಿಕ ನಗರದ ಬಂಗ್ರ ಕೂಳೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ನೇರವಾಗಿ ಪ್ರಧಾನಿ ಮೋದಿಯವರಿಗೇ ತುಳುಭಾಷೆಗೆ ಮಾನ್ಯತೆ ಕೊಡುವ ವಿಚಾರದಲ್ಲಿ ಟ್ವೀಟ್ ಅಭಿಯಾನ ನಡೆಯಲಿದೆ.
ಈ ಅಭಿಯಾನವು ಎಲ್ಲಾ ತುಳು ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆಯಲಿದೆ #TuluOfficialinKA_KL_#TuluTo8thShedule ಹ್ಯಾಷ್ ಟ್ಯಾಗ್ ನಲ್ಲಿ ಈ ಟ್ವೀಟ್ ಅಭಿಯಾನ ನಡೆಯಲಿದೆ. ಸೆಪ್ಟೆಂಬರ್ 1ರ ಮಧ್ಯರಾತ್ರಿ 12.01 ರಿಂದ ಸೆಪ್ಟೆಂಬರ್ 2ರ ಮಧ್ಯರಾತ್ರಿ 11.59ರವರೆಗೆ ಈ ಟ್ವೀಟ್ ಅಭಿಯಾನ ನಡೆಯಲಿದೆ. ಈ ಟ್ವೀಟ್ ಅಭಿಯಾನ ಮೋದಿಯವರ ಗಮನ ಸೆಳೆಯಲು ಎಷ್ಟು ಸಾಧ್ಯವಾಗಲಿದೆ ಎಂದು ಕಾದುನೋಡಬೇಕಿದೆ
Kshetra Samachara
25/08/2022 12:17 pm