ಕಾರ್ಕಳ: ಕಾರ್ಕಳದಲ್ಲಿ ಇವತ್ತು ಕಂದಾಯ ಮೇಳವನ್ನು ಆಯೋಜಿಸಲಾಗಿತ್ತು.ಕಂದಾಯ ಸಚಿವ ಆರ್. ಅಶೋಕ್ ಮೇಳವನ್ನು ಉದ್ಘಾಟಿಸಿದರು.ಬಳಿಕ ನೂರಾರು ಜನರಿಗೆ ಸವಲತ್ತುಗಳ ವಿತರಣೆ ಮಾಡಿದರು.
ಬಳಿಕ ಮಾತನಾಡಿದ ಸಚಿವರು, ಇವತ್ತು ಒಂದೇ ವೇದಿಕೆಯಲ್ಲಿ ನೂರಾರು ಜನರಿಗೆ ಸವಲತ್ತುಗಳನ್ನು ವಿತರಣೆ ಮಾಡಿದ್ದೇವೆ. ಇದೊಂದು ಅಪೂರ್ವ ಕಾರ್ಯಕ್ರಮ. ಸರಕಾರ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಜನರಿಗಾಗಿ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿದೆ.
ಆದರೆ ಜನರ ಬಳಿ ಕೇಳಿದಾಗ ನಮಗೆ ಸೌಲತ್ತುಗಳು ತಲುಪಿಲ್ಲ ಎಂದು ಹೇಳುತ್ತಾರೆ. ಇದಕ್ಕೆ ಕಾರಣ ಮಧ್ಯವರ್ತಿಗಳ ಹಾವಳಿ.ಆದ್ದರಿಂದ ಮಧ್ಯವರ್ತಿಗಳ ಹಾವಳಿ ಗಳನ್ನು ತಪ್ಪಿಸಿ ಜನರಿಗೆ ನೇರ ಸವಲತ್ತು ಸಿಗುವಂತೆ ಮಾಡಲು ಇಂತಹ ಮೇಳಗಳು ಸಹಕಾರಿಯಾಗುತ್ತವೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು. ಕಾರ್ಯಕ್ರಮದಲ್ಲಿ ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಸಹಿತ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗಿಯಾಗಿದ್ದರು.
Kshetra Samachara
19/02/2022 06:50 pm