ಮಂಗಳೂರು: ಕೇಸರಿ ಶಾಲು ಹಾಕಿಕೊಂಡು ಹಿಂದುತ್ವ, ಗೋ ಹೆಸರಿನಲ್ಲಿ ಮತ ಕೇಳಿರುವ ನಳಿನ್ ಕುಮಾರ್ ಕಟೀಲ್ ಅಧಿಕಾರಿಗಳ ಜೊತೆ ಸೇರಿಕೊಂಡು ಗೋಶಾಲೆ ಒಡೆದು ಹಾಕಲು ಹುನ್ನಾರದಲ್ಲಿ ಭಾಗಿಯಾಗಿದ್ದಾರೆ ಅನ್ನೋ ಸಂಶಯವಿದೆ ಅನ್ನೋದಾಗಿ ಎಂದು ಕಾಳಿಕಾ ಮಠಾಧೀಶ ಶ್ರೀರಿಷಿಕುಮಾರ ಸ್ವಾಮೀಜಿ ಆರೋಪಿಸಿದ್ದಾರೆ. ಬಜ್ಪೆಯ ಕೆಂಜಾರುವಿನಲ್ಲಿರುವ ಕಪಿಲ ಗೋಪಾರ್ಕ್ ಇರುವ ಭೂಮಿಯನ್ನ ಕೆಐಎಡಿಬಿ ಸ್ವಾಧೀನ ಪಡಿಸಲು ಮುಂದಾಗಿರುವ ವಿಚಾರ ಕುರಿತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಪಿಲ ಪಾರ್ಕ್ ನಲ್ಲಿ ಅಳಿವಿನಂಚಿನಲ್ಲಿರುವ ಗೋವುಗಳು ಇದ್ದು, ಅಧಿಕಾರಿಗಳು ಭೂಸ್ವಾಧಿನ ವಿಚಾರ ಮುಂದಿಟ್ಟುಕೊಂಡು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಹಿಂದುತ್ವದ ಹೆಸರು ಹೇಳಿಕೊಂಡು ಬಂದ ಸಂಸದ ನಳಿನ್ ಕುಮಾರ್ ಕಟೀಲ್ ಇದೀಗ ಅಧಿಕಾರಿಗಳ ಜೊತೆ ಸೇರಿಕೊಂಡಿದ್ದಾರೆ.
ಬಿಜೆಪಿ ಕೇವಲ ಸುಳ್ಳಿನ ರಾಜಕಾರಣ ಮಾಡುತ್ತಿದೆ. ಕೆಂಜಾರಿನ ಗೋಶಾಲೆ ಉಳಿಸಲು ಸಾಧ್ಯವಾಗಿಲ್ಲ ಅಂದರೆ ಇದು ಹಿಂದೂ ಪರ ಸರಕಾರವಲ್ಲ ಎನ್ನುವುದು ಸಾಬೀತಾಗಲಿದೆ ಎಂದರು. ಕಪಿಲ ಗೋಪಾರ್ಕ್ ಮುಖ್ಯಸ್ಥ ಪ್ರಕಾಶ್ ಶೆಟ್ಟಿ ಮಾತನಾಡಿ, ಅಧಿಕಾರಿಗಳು ಭಾರತೀಯ ಕೋಸ್ಟ್ ಗಾರ್ಡ್ ಗೆ ಜಮೀನು ನೀಡುವ ಉದ್ದೇಶದಿಂದ 160 ಎಕ್ರೆ ಜಾಗವನ್ನ ಗುರುತಿಸಿದ್ದಾರೆ. ಆದರೆ ಗೋಶಾಲೆ ಇರೋ ಜಾಗ ನನ್ನ ಖಾಸಗಿ ಜಮೀನಾಗಿದೆ. ಆದರೆ ಬೆದರಿಸುವ ಮೂಲಕ ಜಮೀನನ್ನ ಸ್ವಾಧೀನ ಪಡಿಸುವ ಪ್ರಯತ್ನವನ್ನ ಅಧಿಕಾರಿಗಳು ನಡೆಸುತ್ತಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟ ಕೈಗೆತ್ತಿಕೊಂಡಿದ್ದೇನೆ ಎಂದರು.
Kshetra Samachara
24/11/2020 03:46 pm