ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕುಂದಾಪುರ ಉತ್ಸವ ಪರ್ವಕ್ಕೆ ಮಿರಾಕಲ್ ಡ್ಯಾನ್ಸ್ ಟೀಮ್ ಸಜ್ಜು

ಉಡುಪಿ: 'ಮಿರಕಲ್ ಡ್ಯಾನ್ಸ್ ಟೀಮ್' ಕುಂದಾಪುರ ಉತ್ಸವಕ್ಕೆ ಇದೀಗ ಸಜ್ಜಾಗುತ್ತಿದೆ. ಇಂದು ಕುಂದಾಪುರ ರೋಟರಿ ಶ್ರೀ ಲಕ್ಷ್ಮೀನರಸಿಂಹ ಕಲಾಮಂದಿರ ಜೂನಿಯರ್ ಕಾಲೇಜಿನ ಹತ್ತಿರ ಆಡಿಷನ್ ನಡೆಯಿತು.

ಈ ಕಾರ್ಯಕ್ರಮದಲ್ಲಿ ನೂರಾರು ಕಲಾವಿದರು ಭಾಗವಹಿಸಿದರು. ಕರ್ನಾಟಕ ಡ್ಯಾನ್ಸ್ ಲೀಗ್ ಎನ್ನುವ ಕಾರ್ಯಕ್ರಮಕ್ಕೆ ಇದೀಗ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಡಿಷನ್ ನ್ನು ತಂಡ ಹಮ್ಮಿಕೊಂಡಿದ್ದು, ಇಂದು ಕೊನೆಯದಾಗಿ ಕುಂದಾಪುರದಲ್ಲಿ ಆಡಿಷನ್ ಇಟ್ಟುಕೊಂಡಿದ್ದರು ಮಿರಾಕಲ್ ಡ್ಯಾನ್ಸ್ ಸಂಸ್ಥೆಯ ಸಂಸ್ಥಾಪಕ ಪ್ರವೀಣ್ ಮಿರಾಕಲ್.

ಕೊರೊನಾ ಮಹಾಮಾರಿ ಯಿಂದಾಗಿ ಕಲಾವಿದರ ಜೀವನ ಒಂದಿಷ್ಟು ತೊಂದರೆಯಲ್ಲಿ ಸಿಲುಕಿಕೊಂಡಿತ್ತು. ಯಾವುದೇ ರೀತಿಯಲ್ಲಿ ಕಲಾವಿದರಿಗೆ ವೃತ್ತಿಜೀವನದಲ್ಲಿ ನಿರಾಸೆ ಹೆಚ್ಚು ಕಾಣಿಸುತ್ತಿತ್ತು. ಕಲಾವಿದರಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವ ವೇದಿಕೆ ಸಿಕ್ಕಿರಲಿಲ್ಲ, ಇದೀಗ ಕುಂದಾಪುರ ಉತ್ಸವದ ಮೂಲಕ ಗ್ರ್ಯಾಂಡ್ ಫಿನಾಲೆಯಲ್ಲಿ ಕುಂದಾಪುರ ಉತ್ಸವ ಮಾಡಲು ಸಕಲ ಸಿದ್ಧತೆ ತಂಡ ನಡೆಸುತ್ತಿದೆ.

Edited By : Manjunath H D
Kshetra Samachara

Kshetra Samachara

14/02/2021 04:55 pm

Cinque Terre

7.42 K

Cinque Terre

0