ಮಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮೀನುಗಾರಿಕೆ ಇಲಾಖೆ ಹಾಗೂ ಮೀನುಗಾರಿಕಾ ಸಂಘಗಳ ಸಹಯೋಗದಲ್ಲಿ ನಗರದ ಮೀನುಗಾರಿಕಾ ಧಕ್ಕೆಯಲ್ಲಿ ಇಂದು(ಆ.12) ಹಮ್ಮಿಕೊಳ್ಳಲಾಗಿದ್ದ ಬೋಟ್ ರ‍್ಯಾಲಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಚಾಲನೆ ನೀಡಿದರು.
ತ್ರಿವರ್ಣ ಧ್ವಜವನ್ನು ಹಾರಾಟ ಮಾಡಿಕೊಂಡು 75 ಬೋಟ್ ಗಳು ಧಕ್ಕೆ ಪ್ರದೇಶದಲ್ಲಿ ಸಂಚಾರ ಮಾಡಿತು. ಈ ಸಂದರ್ಭ ಜಿಪಂ ಸಿಇಒ ಡಾ.ಕುಮಾರ್, ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಹರೀಶ್, ಉಪ ನಿರ್ದೇಶಕರಾದ ಸುಶ್ಮಿತಾ, ರೇವತಿ, ರೇಖಾ, ಕರಾವಳಿ ಕಾವಲು ಪಡೆಯ ಅಧಿಕಾರಿಗಳು, ಇನ್ನಿತರ ಅಧಿಕಾರಿಗಳು, ಜನ ಪ್ರತಿನಿಧಿಗಳು ಹಾಗೂ ಬೋಟ್ ಚಾಲಕರು, ಮಾಲೀಕರು ಉಪಸ್ಥಿತರಿದ್ದರು.
Kshetra Samachara
12/08/2022 06:39 pm