ಉಡುಪಿ: ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರ ವಿಷಯಗಳಲ್ಲಿ ಸುಮಾರು ಮೂರು ದಶಕಗಳಿಗೂ ಅಧಿಕ ಕಾಲ ಅಧ್ಯಾಪನ ಅನುಭವ ಹೊಂದಿರುವ ಪ್ರೊ.ಇಂದಿರಾ ಕಿದಿಯೂರು ಇಂದು ನಿಧನರಾದರು. ಅವರಿಗೆ 84 ವರ್ಷ ಪ್ರಾಯವಾಗಿತ್ತು.
ಉಡುಪಿ ಎಂಜಿಎಂ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ ಪ್ರಾರಂಭಿಸಿ ಹಲವು ವರ್ಷಗಳ ಕಾಲ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ವಿದ್ಯಾರ್ಥಿಗಳ ಪಾಲಿಗೆ ಪ್ರೊ. ಇಂದಿರಾ ಮೇಡಂ ನಿಜವಾದ ಅರ್ಥದಲ್ಲಿ ಮಾತೃ ಹೃದಯದ ವಾತ್ಸಲ್ಯ ಮೂರ್ತಿಯಾಗಿದ್ದರು.
ಪ್ರೊ.ಇಂದಿರಾ ರವರ ಅಚ್ಚುಮೆಚ್ಚಿನ ವಿಷಯ ಅರ್ಥ ಶಾಸ್ತ್ರವಾಗಿತ್ತು. ಮುಂಬೈ ವಿ.ವಿ.ಯಲ್ಲಿ ಅರ್ಥ ಶಾಸ್ತ್ರ ಅಧ್ಯಯನ ಮಾಡುವಾಗ ಶ್ರೇಷ್ಠ ಅರ್ಥ ಶಾಸ್ತ್ರಜ್ಞ ಪ್ರೊ.ಬ್ರಹ್ಮಾನಂದ ಅವರ ಗುರುಗಳಾಗಿದ್ದರು ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತಿದ್ದರು. ಹೀಗಾಗಿ ಹಲವು ವಿದ್ಯಾರ್ಥಿಗಳಿಗೆ ಅವರು ಅಕೌಂಟೆನ್ಸಿ ಹಾಗೂ ಸಂಖ್ಯಾಶಾಸ್ತ್ರ ವಿಷಯಗಳಲ್ಲಿ ಪಾಠ ಹೇಳಿಕೊಡುತಿದ್ದರು.
ಪ್ರೊ. ಇಂದಿರಾ ಅವರು ಪತಿ ಎಂ.ಜಿಎಂ.ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದ ಪ್ರೊ.ರಮೇಶ್ ಕಿದಿಯೂರು, ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
Kshetra Samachara
10/10/2022 04:11 pm