ಉಡುಪಿ: ಯುವ ವೈದ್ಯೆ ಡಾ. ರಚನಾ ಭಟ್ ಇತ್ತೀಚಿಗೆ ದೆಹಲಿಯ ಆರೋಗ್ಯ ಆಶ್ರಯದಲ್ಲಿ ನಡೆದ ವಾರ್ಷಿಕ ಸ್ನಾತಕೋತ್ತರ ಘಟಿಕೋತ್ಸವ ಸಮಾರಂಭದಲ್ಲಿ 2019 ಸಾಲಿನ NBEMS ನ ಎಮೆರ್ಜೆನ್ಸಿ ಮೆಡಿಸಿನ್ ಸ್ನಾತಕೋತ್ತರ ವಿಭಾಗದಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಅಂಕಗಳಿಸಿ ರಾಷ್ಟ್ರಪತಿ ಚಿನ್ನದ ಪದಕವನ್ನು ಪಡೆದು ವಿಶಿಷ್ಟ ಸಾಧನೆ ಮಾಡಿದ್ದಾರೆ.
ಉಡುಪಿಯ ಕಲ್ಯಾಣಪುರದ ವಿಜಯಾ ಭಟ್ ಹಾಗೂ ಪ್ರಸಿದ್ಧ ವೈದ್ಯರಾದ ಡಾ.ಆರ್.ಎನ್. ಭಟ್ ದಂಪತಿಯ ಪುತ್ರಿ ಡಾ. ರಚನಾ ಭಟ್, ಪ್ರಾಥಮಿಕ ಶಾಲೆ ಉಡುಪಿ ಸೈಂಟ್ ಸಿಸಿಲಿ, ಎಂಜಿಎಮ್, ಕೆಎಂಸಿ ಮಣಿಪಾಲ ಕಾಲೇಜಿನ ಹಳೇ ವಿದ್ಯಾರ್ಥಿನಿಯಾಗಿದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
Kshetra Samachara
28/06/2022 06:42 pm