ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಮಂಗಳಮುಖಿಯರಿಂದ ಪ್ರತಿಭಾ ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮ

ಬ್ರಹ್ಮಾವರ: ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣ ವಿಭಿನ್ನ‌ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಚೋಸನ್ ಜನರೇಶನ್ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಮಂಗಳಮುಖಿಯರ ಪ್ರತಿಭಾ ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮ ಅದಾಗಿತ್ತು.

ಸಾಮಾಜಿಕ ಅಸಮಾನತೆ ವಿರೋಧಿ ತಂಡದಿಂದ ಪ್ರತಿಭಾ ಪ್ರದರ್ಶನ ಮತ್ತು ಜಾಗೃತಿ ಸಮಾಲೋಚನೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕರ್ನಾಟಕ ಮಂಗಳಮುಖಿ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಅರುಂಧತಿ ಹೆಗ್ಡೆ ಮಾತನಾಡಿ, ಬದಲಾಗುತ್ತಿರುವ ಭಾರತದಲ್ಲಿ ತೃತೀಯ ಲಿಂಗಿಗಳೂ ಕೂಡಾ ಮಾನವ ಸಮಾಜದವರೇ ಎನ್ನುವ ಭಾವನೆ ಹೆಚ್ಚಬೇಕು. ನಾವು ಮನೆಯವರಿಂದ ಮತ್ತು ಸಮಾಜದಿಂದ ದೂರ ಇರಲು ಕಾರಣ ಈ ಸಮಾಜದಲ್ಲಿರುವವರೇ. ನಮಗೆ ಅನುಕಂಪ ಕರುಣೆಗಿಂತ ಬದುಕುವ ಮತ್ತು ಹಸಿವಿಗಾಗಿ ಒಂದು ಮಾರ್ಗ ಹಿಡಿಯುವುದೇ ಸವಾಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅರುಂಧತಿ ಹೆಗ್ಡೆಯವರನ್ನು ಸನ್ಮಾನಿಸಲಾಯಿತು. ಬಳಿಕ ಮಂಗಳಮುಖಿಯರಿಂದ ಹಾಡು, ನಾನಾ ನೃತ್ಯ ಕಾರ್ಯಕ್ರಮ ನಡೆಯಿತು.

Edited By : Somashekar
Kshetra Samachara

Kshetra Samachara

22/06/2022 08:29 pm

Cinque Terre

5.04 K

Cinque Terre

0