ಮಂಗಳೂರು: ಮಂಗಳೂರು ವಿವಿಯ ಅಧೀನಕ್ಕೊಳಪಟ್ಟ ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಓರ್ವ ವಿದ್ಯಾರ್ಥಿನಿ ಬೇರೆ ಕಾಲೇಜಿಗೆ ಹೋಗಲು ಟಿಸಿ ಪಡೆದಿದ್ದಾಳೆ.
ಕಳೆದೊಂದು ತಿಂಗಳಿನಿಂದ ಈ ಕಾಲೇಜಿನಲ್ಲಿ ತರಗತಿಯಲ್ಲಿ ಹಿಜಾಬ್ ಧರಿಸಲು 15 ವಿದ್ಯಾರ್ಥಿನಿಯರು ಅವಕಾಶ ಕೋರಿದ್ದರು. ಈ ಮೂಲಕ ಭಾರೀ ವಿವಾದ ಸೃಷ್ಟಿಯಾಗಿತ್ತು. ಪ್ರತಿಭಟನೆಯೂ ನಡೆದಿತ್ತು.
ಆದರೆ ಕಾಲೇಜು ಆಡಳಿತ ಮಂಡಳಿ ಯಾವುದೇ ಕಾರಣಕ್ಕೆ ತರಗತಿಯೊಳಗೆ ಹಿಜಾಬ್ ಧರಿಸಲು ಅವಕಾಶ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ವಿದ್ಯಾರ್ಥಿಯರು ಕಾಲೇಜು ಗ್ರಂಥಾಲಯದಲ್ಲಿ ಉಳಿದು ಹೋಗುತ್ತಿದ್ದರು. ಆದರೆ ಆ ಬಳಿಕ ಅಲ್ಲಿಗೂ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಡಿಸಿಯವರ ಮೊರೆಹೊಕ್ಕಿದ್ದರು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಐವರು ವಿದ್ಯಾರ್ಥಿನಿಯರು ಟಿಸಿ ಪಡೆದು ಬೇರೆಡೆ ಹೋಗುತ್ತಾರೆ ಎಂಬ ವಿಚಾರ ಕಳೆದ ಎರಡು ದಿನಗಳ ಹಿಂದೆ ಕೇಳಿ ಬಂದಿತ್ತು. ಇದೀಗ ಓರ್ವ ವಿದ್ಯಾರ್ಥಿನಿ ಬೇರೆ ಕಾಲೇಜಿಗೆ ತೆರಳಲು ಟಿಸಿ ಪಡೆದಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಆಕೆ ಹಿಜಾಬ್ ಸಮವಸ್ತ್ರದ ಭಾಗವಾಗಿರುವ ಕಾಲೇಜಿಗೆ ತೆರಳಲು ಮುಂದಾಗಿದ್ದಾಳೆ. ಅದೇ ರೀತಿ ಮೂವರು ವಿದ್ಯಾರ್ಥಿನಿಯರು ಬೇರೆ ಕಾಲೇಜಿಗೆ ಹೋಗಲು ಎನ್ಒಸಿ ಪಡೆದಿದ್ದಾರೆ.
Kshetra Samachara
22/06/2022 07:17 pm