ಮುಲ್ಕಿ: ಸಮೀಪದ ಪಂಜಿನಡ್ಕ ಅನುದಾನಿತ ಕೆ.ಪಿ.ಎಸ್.ಕೆ. ಸ್ಮಾರಕ ಪ್ರೌಢಶಾಲೆ ಹಾಗೂ ಕೊಲಕಾಡಿ ವಿದ್ಯಾ ಪ್ರಚಾರಿಣಿ ಸಂಘ ( ರಿ) ಆಶ್ರಯದಲ್ಲಿ ನೂತನ ಶಾಲಾ ವಾಹನ ಹಸ್ತಾಂತರ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಕೊಲಕಾಡಿ ಕೆಪಿಎಸ್ಕೆ ಪ್ರೌಢಶಾಲೆಯಲ್ಲಿ ನಡೆಯಿತು.
ಪ್ರತಿಭಾ ಪುರಸ್ಕಾರ ನೆರವೇರಿಸಿ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳ ಸಾಧನೆ ಅಭೂತಪೂರ್ವವಾಗಿದ್ದು ಮುಂದಿನ ದಿನಗಳಲ್ಲಿ ಶಾಲೆ ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಶುಭ ಹಾರೈಸಿದರು.
ಅತಿಕಾರಿಬೆಟ್ಟು ಗ್ರಾಪಂ ಅಧ್ಯಕ್ಷ ಮನೊಹರ್ ಕೋಟ್ಯಾನ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು
ಮುಲ್ಕಿ ನ ಪಂ ಅಧ್ಯಕ್ಷ ಸುಭಾಶ್ ಶೆಟ್ಟಿ, ಮಂಡಲಾಧ್ಯಕ್ಷ ಸುನೀಲ್ ಅಳ್ವ, ಶಾಲಾ ಸಂಚಾಲಕ ಗಂಗಾಧರ್ ಶೆಟ್ಟಿ, ರಾಘವೇಂದ್ರ ಮೊಗೆರಾಯ, ದೆಪ್ಪುಣಿಗುತ್ತು ಸುಧಾಕರ ಶೆಟ್ಟಿ, ರಂಗನಾಥ ಶೆಟ್ಟಿ, ನಿತಿನ್ ಶೆಟ್ಟಿ, ದಾನಿಗಳಾದ ಸತೀಶ್, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಅಂಬರೀಶ್ ಲಮಾಣಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದಾನಿ ರಘನಂದನ್ ಕಾಮತ್ ದಂಪತಿಗಳಿಗೆ ಸನ್ಮಾನ, ನಿವೃತ್ತ ಗೊಳ್ಳುತ್ತಿರುವ ಶಿಕ್ಷಕ ನೋಣಯ್ಯ ಆರ್, ಸಿಂಬಧಿ ರಾಮಣ್ಣ ನಾಯಕ್ ರವರನ್ನು ಸನ್ಮಾನಿಸಲಾಯಿತು. ಸಿ ಎ ರಾಘವೇಂದ್ರ ಮೊಗೆರಾಯ ಮತ್ತು ಎಸೆಸೆಲ್ಸಿ ಉತ್ತಮ ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಗ್ರೆಟ್ಟಾ ರೋಡೊಡ್ರಿಗಸ್ ಸ್ವಾಗತಿಸಿ, ನಿವೃತ್ತ ಮುಖ್ಯೋಪಾಧ್ಯಾಯ ನಾಗಭೂಷಣರಾವ್ ನಿರೂಪಿಸಿದರು.
Kshetra Samachara
14/06/2022 03:26 pm