ಸುರತ್ಕಲ್: ಶತಮಾನದ ಸಂಭ್ರಮದಲ್ಲಿರುವ ಚೇಳ್ಯಾರುವಿನ ದ.ಕ ಜಿಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಆಂಗ್ಲ ಮಾಧ್ಯಮ ವಿಭಾಗ ಆರಂಭವಾಯಿತು.
ಈ ಶಾಲೆಯಲ್ಲಿ ಕನ್ನಡ ಮಾಧ್ಯಮ ವಿಭಾಗಕ್ಕೆ ಮಕ್ಕಳ ಸಂಖ್ಯೆ ಕುಸಿಯುತ್ತಿದೆ. ಈ ಹಿನ್ನಲೆಯಲ್ಲಿ ಸರಕಾರದ ಅನುಮತಿಯೊಂದಿಗೆ ಗ್ರಾಮಸ್ಥರು ಶಾರದಾ ವಿದ್ಯಾ ಟ್ರಸ್ಟ್ ಸಹಕಾರದಲ್ಲಿ ಆಂಗ್ಲ ಮಾಧ್ಯಮ ವಿಭಾಗ ಇಂದು ಉದ್ಘಾಟನೆ ನಡೆಯಿತು.
ಚೇಳ್ಯಾರು ಬಸ್ ನಿಲ್ದಾಣದ ಸಮೀಪದಿಂದ ಶಾಲೆಯವರೆಗೆ ಮಕ್ಕಳನ್ನು ಮೆರವಣಿಗೆ ಮೂಲಕ ಕರೆ ತರಲಾಯಿತು. ಪಂಚಾಯತ್ ಅಧ್ಯಕ್ಷೆ ಯಶೋಧ ಉದ್ಘಾಟಿಸಿ ಶುಭ ಹಾರೈಸಿದರು. ಉಪನ್ಯಾಸಕ ಅನಂತಪ್ರಭು ಮಾತನಾಡಿ, ಮಕ್ಕಳಿಗೆ ಸಲಕರಣೆ ವಿತರಿಸಿ ಮಾತನಾಡಿ, ಸ್ಥಳೀಯ ಸರಕಾರಿ ಶಾಲೆಯನ್ನು ದೆಹಲಿ ಅತ್ಯುತ್ತಮ ಮಾದರಿಯನ್ನಾಗಿ ತೋರಿಸಲಾಗುತ್ತದೆ. ಚೇಳ್ಯಾರು ಶಾಲೆ ಮುಂದಿನ 6 ತಿಂಗಳಲ್ಲಿ ಕರ್ನಾಟಕಕ್ಕೆ ಮಾದರಿಯಾಗಲಿ ಎಂದು ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಟ್ರಸ್ಟ್ನ ಅಧ್ಯಕ್ಷೆ ವೀಣಾ ಶೆಟ್ಟಿ ಮಾತನಾಡಿ, ಇಲ್ಲಿನ ಸರಕಾರಿ ಶಾಲೆಯಲ್ಲಿ ಕಲಿತು ಹೋದ ವಿದ್ಯಾರ್ಥಿಗಳು ಇಂದು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಉತ್ತಮ ಹುದ್ದೆಯನ್ನು ಅಲಂಕರಿಸಿದ್ದಾರೆ. ಇಂತಹ ಶಾಲೆಯನ್ನು ಮುಚ್ಚಲು ಬಿಡದೆ ಮತ್ತೆ ಮಕ್ಕಳಿಂದ ತುಂಬುವಂತೆ ಮಾಡಬೇಕೆಂಬ ದೃಷ್ಟಿಯಿಂದ ಆಂಗ್ಲ ಮಾಧ್ಯಮ ವಿಭಾಗ ಆರಂಭಿಸಲಾಗಿದೆ. ಟ್ರಸ್ಟ್ನ ಸದಸ್ಯರು ಅನುದಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಶಾಲೆ ಉತ್ತಮವಾಗಿ ನಡೆಯಲು ಗ್ರಾಮಸ್ಥರ ಆರ್ಥಿಕ ಸಹಕಾರ
ಅಗತ್ಯವಿದೆ ಎಂದರು.
Kshetra Samachara
06/06/2022 10:29 pm