ಮುಲ್ಕಿ:ಶಿಕ್ಷಣ ಕ್ಷೇತ್ರದಲ್ಲಿ ಮುಲ್ಕಿ ವ್ಯಾಸಮಹರ್ಷಿ ವಿದ್ಯಾಪೀಠ ಶಾಲೆಯ ವೀಕ್ಷಾ ಶೆಟ್ಟಿಯವರ ಸಾಧನೆ ಅಭಿನಂದನೀಯ ಎಂದು ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು. ಅವರು ಕಿನ್ನಿಗೋಳಿಯಲ್ಲಿ ಜಾಗತಿಕ ಬಂಟರ ಸಂಘದ ವತಿಯಿಂದ ನಡೆದ ಎಸ್.ಎಸ್.ಎಲ್.ಸಿ ಯಲ್ಲಿ 625/625 ಅಂಕ ಪಡೆದ ಮುಲ್ಕಿ ವೀಕ್ಷಾ ಶೆಟ್ಟಿ ರವರನ್ನು ಗೌರವಧನದೊಂದಿಗೆ ಸನ್ಮಾನಿಸಿ ಮಾತನಾಡಿ ವೀಕ್ಷಾ ಅವರ ಸಾಧನೆ ಕೇವಲ ಬಂಟ ಸಮಾಜಕ್ಕೆ ಮಾತ್ರವಲ್ಲ ಜಿಲ್ಲೆಗೆ ಹೆಮ್ಮೆಯ ವಿಷಯ ಎಂದರು.
ಈ ಸಂದರ್ಭ ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಪುರುಶೋತ್ತಮ ಶೆಟ್ಟಿ,ಗೌರವಾಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ,ಕಾರ್ಯಕಾರಿ ಸಮಿತಿ ಸದಸ್ಯರಾದ ಮುಲ್ಕಿ ಜೀವನ್ ಕೆ ಶೆಟ್ಟಿ, ನವೀನ್ ಶೆಟ್ಟಿ, ನಿಶಾಂತ್ ಶೆಟ್ಟಿ, ಮುಲ್ಕಿ ಚೌಟರಮನೆ ವೀಕ್ಷಾ ಶೆಟ್ಟಿ ತಂದೆ ವೇದಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
04/06/2022 11:15 am