ಮೂಡುಬಿದಿರೆ: ವಿದ್ಯೆ ಇದ್ದವರು ವಿನಯವಂತರಾಗಿರುತ್ತಾರೆ ಎಂಬುದು ಮುಂಚಿನಿಂದಲೂ ಹಿರಿಯರು ಪಾಲಿಸಿಕೊಂಡು ಬಂದಂತಹ ಮಾತು ಹಾಗಾಗಿ ಮಕ್ಕಳು ಉತ್ತಮ ರೀತಿಯಲ್ಲಿ ಪಾಠವನ್ನು ಕಲಿತು ಮುಂದಕ್ಕೆ ಹೆತ್ತವರಿಗೆ, ಗುರುಗಳಿಗೆ, ಊರು-ದೇಶಕ್ಕೆ ಹೆಸರನ್ನು ತರಬೇಕೆಂದು ಮೂಡುಬಿದಿರೆ ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಹೇಳಿದರು. ಅವರು ಸೋಮವಾರ ಸ.ಹಿ.ಪ್ರಾಥಮಿಕ ಶಾಲೆ ಮಾಸ್ತಿಕಟ್ಟೆಯಲ್ಲಿ ಆಯೋಜಿಸಲಾದ ಶಾಲಾ ಆರಂಭೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮಕ್ಕಳು ಶಾಲೆಗೆ ಭಯದಿಂದ ಬರದೇ ಸಂತೋಷದಿಂದ ಇರಬೇಕೆಂಬ ನಿಟ್ಟಿನಲ್ಲಿ ಸರಕಾರವು ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಜಾರಿ ತಂದು ಮಕ್ಕಳನ್ನು ಶಾಲೆಗೆ ಕರೆತರಲು ವಿಭಿನ್ನ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎಸ್. ಡಿ. ಎಂ. ಸಿ ಅಧ್ಯಕ್ಷ ಅಶೋಕ್ ಆಚಾರ್ಯ, ತ್ರಿಭವನ್ ಹೋಟೆಲ್ ಮಾಲಕ ಪೃಥ್ವಿರಾಜ್ ಜೈನ್, ಹಾಗೂ ಶಿಕ್ಷಕರು, ಪೋಷಕರು, ಮಕ್ಕಳು ಉಪಸ್ಥಿತರಿದ್ದರು.
Kshetra Samachara
16/05/2022 10:07 pm