ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : 6 ವಿದ್ಯಾರ್ಥಿನಿಯರು ಟೆರರಿಸ್ಟ್ ಗಳು : ಯಶ್ ಪಾಲ್ ಸುವರ್ಣ

ಉಡುಪಿ: ಉಡುಪಿಯ ಆರು ವಿದ್ಯಾರ್ಥಿನಿಯಯರು ಟೆರರಿಸ್ಟ್ ಸಂಘಟನೆ ಸದಸ್ಯರು ಎಂಬುದು ಇವತ್ತು ಸಾಬೀತಾಗಿದೆ ಎಂದು ಉಡುಪಿಯ ಸರಕಾರಿ ಮಹಿಳಾ ಕಾಲೇಜು ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ,ಅಂದು ಈ ವಿದ್ಯಾರ್ಥಿನಿಯರು ಹೈಕೋರ್ಟ್ ತೀರ್ಪಿಗೆ ವ್ಯತಿರಿಕ್ತವಾಗಿ ಹೇಳಿಕೆ ಕೊಟ್ಟರು.ಇವತ್ತು ಅವರಿಗೆ ಅಲ್ ಖೈದಾ ಸಂಘಟನೆ ಬೆಂಬಲ ನೀಡುತ್ತಿದೆ. ಕೆಲವು ಸಂಘಟನೆಯವರು ಶರಿಯತ್ ಕಾನೂನು ಬಗ್ಗೆ ಮಾತನಾಡುತ್ತಾರೆ.ಇವರಿಗೂ ಶರಿಯತ್ ಕಾನೂನಿನಂತೆ ಶಿಕ್ಷೆಯಾಗಲಿ. ಈ ಮೂಲಕ ಇನ್ನಷ್ಟು ಮುಗ್ಧ ಮಕ್ಕಳ ಮೇಲೆ ಪ್ರಭಾವ ಆಗುವ ಸಾಧ್ಯತೆ ತಪ್ಪಿಸಬೇಕು.

ದೇಶಕ್ಕೆ, ಉಡುಪಿಗೆ ಗಂಡಾಂತರ ಆಗುವ ಸಾಧ್ಯತೆ ಇದೆ. ಹಿಜಾಬ್ ಪ್ರಕರಣದ ಎನ್ ಐ ಎ ತನಿಖೆ ಆಗಬೇಕು ಎಂದು ಈ ಮೊದಲೂ ಹೇಳಿದ್ದೆ ಈಗಲೂ ಆಗ್ರಹಿಸುತ್ತೇನೆ ಎಂದು ಹೇಳಿದರು.

Edited By :
Kshetra Samachara

Kshetra Samachara

06/04/2022 10:49 pm

Cinque Terre

12.72 K

Cinque Terre

0