ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಣಿತದಲ್ಲಿ ತರ್ಕಗಳು ಸದಾ ಪುರಾವೆಯೊಂದಿಗೆ ನಮ್ಮ ಮುಂದೆ ತೆರೆದುಕೊಳ್ಳುತ್ತವೆ

ಮೂಡುಬಿದಿರೆ : ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದ ವತಿಯಿಂದ `ಲಾಜಿಕ್ ಮತ್ತು ಪ್ರೂಫ್ಸ್' ವಿಷಯದ ಕುರಿತು ಅತಿಥಿ ಉಪನ್ಯಾಸ ಆಯೋಜಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅಜೇಕರ್ ಪದ್ಮ ಗೋಪಾಲ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ, ಗಣಿತವು ಭಾಷೆಗಿಂತ ಭಿನ್ನವಾಗಿಲ್ಲ, ವಿಷಯವನ್ನು ಆನಂದಿಸಿದಾಗ ಅದು ಸುಲಭವಾಗಿ ಅರ್ಥವಾಗುತ್ತದೆ. ಪ್ರಮೇಯಗಳನ್ನು ಓದುವುದು ಮಾತ್ರವಲ್ಲದೆ ಜೀವನದಲ್ಲಿಯೂ ಕೂಡ ಅದನ್ನು ಹೇಗೆ ಬಳಸಬೇಕೆಂದು ತಿಳಿದುಕೊಳ್ಳಬೇಕು. ಹೊಸ ವಿಚಾರಗಳ ಅನ್ವೇಷಣೆ, ಸಂಶೋಧನೆಯೊಂದಿಗೆ ಬಿಡುವಿನ ಸಮಯದಲ್ಲಿ ಭಾಷಾ ಸಾಹಿತ್ಯಗಳನ್ನು ಓದು, ಬದುಕಿನಲ್ಲಿ ಆದ್ಯತೆಗಳನ್ನು ಹೊಂದಿದಾಗ ಒತ್ತಡ ರಹಿತವಾಗಿ ಕೆಲಸ ಮಾಡಬಹುದು ಎಂದರು. ಗಣಿತದಲ್ಲಿ ತರ್ಕಗಳು ಸದಾ ಪುರಾವೆಯೊಂದಿಗೆ ನಮ್ಮ ಮುಂದೆ ತರೆದುಕೊಳ್ಳುತ್ತವೆ.

ಕಾರ್ಯಕ್ರಮದಲ್ಲಿ ಗಣಿತ ವಿಭಾಗದ ಮುಖ್ಯಸ್ಥ ದೀಪಕ್ ಕೆ.ಎಸ್, ಉಪನ್ಯಾಸಕ ವೇದಮೂರ್ತಿ ಹೆಚ್.ಎನ್ ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

04/03/2022 06:56 pm

Cinque Terre

5.39 K

Cinque Terre

0