ಬಂಟ್ವಾಳ: ದ.ಕ.ಜಿಪಂ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭದ ಎಸ್.ಡಿ.ಎಂ.ಸಿ. ಸಭೆ ನಡೆದಿದ್ದು, ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷರಾಗಿ ಸಂಜೀವ ಮೂಲ್ಯ ಆಯ್ಕೆಗೊಂಡಿದ್ದಾರೆ.
ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಅವರು ಸಭೆಯ ಅಧ್ಯಕ್ಷತೆ ವಹಿಸಿ ಸರಕಾರದಿಂದ ಉಚಿತವಾಗಿ ನೀಡುವ ಪಠ್ಯಪುಸ್ತಕವನ್ನು ಸಾಂಕೇತಿಕವಾಗಿ ವಿತರಿಸಿದರು. ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ವೇಗಸ್, ಸದಸ್ಯರಾದ ಜಯಂತಿ ಜನಾರ್ಧನ್, ಗೀತಾ ಜಯಶೀಲ ಗಾಂಭೀರ್, ಮೀನಾಕ್ಷಿ ಸುನಿಲ್, ಉಮಾವತಿ ಸಪಲ್ಯ, ಜಯಪ್ರಸಾದ್ ಇವರ ಉಪಸ್ಥಿತಿಯಲ್ಲಿ ನಡೆದ ನೂತನ ಶಾಲಾಭಿವೃದ್ಧಿ ಸಮಿತಿಯ ರಚನೆಯ ರೂಪರೇಷೆಗಳನ್ನು ಮುಖ್ಯಶಿಕ್ಷಕ ನಾರಾಯಣ ಪೂಜಾರಿ ಅವರು ನೀಡಿದರು.
ಮುಂದಿನ ಅವಧಿಗೆ ನೂತನ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಸಂಜೀವ ಮೂಲ್ಯ ಮಜಿ, ಉಪಾಧ್ಯಕ್ಷರಾಗಿ ವಿಜಯ ಶೇಖರ್ ಬೆತ್ತಸರವು ಅವಿರೋಧವಾಗಿ ಆಯ್ಕೆಯಾದರು. ಉಳಿದಂತೆ ಸದಸ್ಯರಾಗಿ ಗೋಪಾಲಕೃಷ್ಣ ಭಟ್ ದಿವಾನ, ಕೊರಗಪ್ಪ ನಾಯ್ಕ ಸಿಂಗೇರಿ, ವಾಮನ ಬಂಗೇರ ನೆಕ್ಕರಾಜೆ, ವಿಶ್ವನಾಥ್ ಎ, ಸಾವಿತ್ರಿಬೋಳಂಗಡಿ, ಉಮಾವತಿ ಮಜಿ, ವೀಣಾ ಮೈರ, ವನಿತಾ ತಾಳಿತ್ತನೂಜಿ, ಉಮ್ಮರ್ ಫಾರೂಕ್ ಕೊಡಪದವು ಮದಕ ,ಬಿಕೆ ಅಬ್ದುಲ್ ಮಜೀದ್ ವೀರಕಂಬ, ಸುರೇಶ್ ನಾಯ್ಕ ಬೆತ್ತಸರವು ಲಕ್ಷ್ಮಣಗೌಡ ನಂದನತಿಮಾರು, ಅಸ್ಲಿಮಾ ಕಂಪದಬೈಲು, ರಂಜಿತಾ ಮಜಿ, ಹರಿಣಾಕ್ಷಿ ಕೇಪುಲಕೊಡಿ, ಸರಿತಾಪ್ರಾಂಕ್ ಮಜಿ, ಆಯ್ಕೆಯಾದರು.
ಸಮಿತಿಯ ಕಾರ್ಯದರ್ಶಿಯಾಗಿ ಮುಖ್ಯಶಿಕ್ಷಕ ನಾರಾಯಣ ಪೂಜಾರಿ ಪದನಿಮಿತ್ತ ಸದಸ್ಯರಾಗಿ ಸಹಶಿಕ್ಷಕಿ ಶಕುಂತಲಾ ಎಂ ಬಿ, ಕಿರಿಯ ಆರೋಗ್ಯ ಸಹಾಯಕಿ ಜ್ಯೋತಿ ಎನ್ ಕೆ ,ಪಂಚಾಯತ್ ಸದಸ್ಯೆ ಜಯಂತಿ ಜನಾರ್ಧನ್, ಅಂಗನವಾಡಿ ಶಿಕ್ಷಕಿ ಸುಮತಿ ,ಹಾಗೂ ಶಾಲಾ ವಿದ್ಯಾರ್ಥಿನಿ ಶ್ರೇಯಳನ್ನು ಆಯ್ಕೆ ಮಾಡಲಾಯಿತು.
Kshetra Samachara
17/09/2021 08:02 pm