ಹಿರಿಯಡ್ಕ: ಉಡುಪಿ ಸಮೀಪದ ಹಿರಿಯಡ್ಕದ ಅಕ್ಕ ತಮ್ಮ ಇಬ್ಬರೂ ಒಟ್ಟಿಗೆ ಚಾರ್ಟರ್ಡ್ ಅಕೌಂಟೆಂಟ್ಸ್ ಪರೀಕ್ಷೆ ಪಾಸಾಗುವ ಮೂಲಕ ವಿಶೇಷ ಸಾಧನೆ ಮಾಡಿ ಜಿಲ್ಲೆಗೆ ಹೆಸರು ತಂದಿದ್ದಾರೆ. ರಘುನಾಥ್ ಕಾಮತ್- ರಾಧಿಕಾ ಕಾಮತ್ ದಂಪತಿಯ ಪುತ್ರಿ ಸುಪ್ರೀತಾ ಕಾಮತ್ ಹಾಗೂ ಪುತ್ರ ಸುಬ್ರಹ್ಮಣ್ಯ ಕಾಮತ್ ಸಾಧಕರು. ಇಬ್ಬರೂ ಪೂರ್ಣಪ್ರಜ್ಞ ಸಂಜೆ ಕಾಲೇಜಿನ ಬಿ.ಕಾಂ. ಪದವೀಧರರಾಗಿದ್ದು, ಸುಪ್ರೀತಾ ಉಡುಪಿಯ ನಾಯಕ್ ಅಸೋಸಿಯೇಟ್ಸ್‌ನಲ್ಲಿ, ಸುಬ್ರಹ್ಮಣ್ಯ ಅವರು ಕಾಮತ್ ಆ್ಯಂಡ್ ಕೋ ಸಂಸ್ಥೆಯಲ್ಲಿ ಆರ್ಟಿಕಲ್‌ಶಿಪ್ ಪೂರ್ಣಗೊಳಿಸಿದ್ದರು.
ಭವಿಷ್ಯದಲ್ಲಿ ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿ ಐಎಎಸ್ ಅಧಿಕಾರಿ ಆಗಬೇಕು ಎಂಬುದು ನನ್ನ ಕನಸು. ಸಿಎ ನನ್ನ ಅಂತಿಮ ಗುರಿ ಅಗಿರಲಿಲ್ಲ. ಪಬ್ಲಿಕ್ ಸರ್ವೀಸ್ ನನ್ನ ಆದ್ಯತೆ ಆಗಿದ್ದು, ಐಎಎಸ್‌ಗೆ ಮುಂದೆ ಹೆಚ್ಚಿನ ತಯಾರಿ ಮಾಡಿಕೊಳ್ಳಬೇಕು ಎಂದು ಸುಬ್ರಹ್ಮಣ್ಯ ಕಾಮತ್ ಹೇಳಿದ್ದಾರೆ.
Kshetra Samachara
15/09/2021 01:15 pm