ಬೈಂದೂರು : ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಗಂಗೊಳ್ಳಿ ಸ್ಟೆಲ್ಲಾ ಮೇರಿಸ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ಹೆತ್ತವರಿಗೂ ಹಾಗೂ ಊರಿಗೂ ಕೀರ್ತಿ ತಂದ ಶ್ರೇಯಾ ಮೇಸ್ತ ಇವರು 625 ಕ್ಕೆ 625ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ .
ಬಡತನದ ಏಳುಬೀಳುಗಳ ನಡುವೆಯೂ ಎಡಬಿಡದೆ ಅಂದಿನ ಪಾಠವನ್ನು ಅಂದೇ ಓದುವ ಹಾಗೂ ಬರೆಯುವ ಮೂಲಕ ಸಾಧನೆ ಮಾಡಿ ಹೆತ್ತವರಿಗೂ .ಊರಿಗೂ .ಕೀರ್ತಿ ತಂದುಕೊಟ್ಟ ವಿದ್ಯಾರ್ಥಿನಿ. ಹೌದು ಹಿಂದೆ ಕಲಿತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿ . ಹಾಗೂ ಗಂಗೊಳ್ಳಿ ಸ್ಟೆಲ್ಲಾ ಮೇರೀಸ್ ಪ್ರೌಢಶಾಲೆಯ ಶಿಕ್ಷಕ ವೃಂದದವರ ಸಹಕಾರದಿಂದ ಸಾಧನೆ ಸಾಧ್ಯವಾಗಿದೆ .ಮುಂದಿನ ವಿಭಾಗದಲ್ಲಿ ವಿಜ್ಞಾನ ಆಯ್ದುಕೊಂಡು ವೈದ್ಯರಾಗಬೇಕೆಂಬ ಗುರಿ ಇದೆ ಎಂದು ಹೇಳಿದರು .
ಮೇಸ್ತ ಸಮಾಜದ ಮುಖಂಡರೂ ಆದ ಗುಜ್ಜಾಡಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷರು ಹರೀಶ್ ಮೇಸ್ತ ಸಮಾಜದ ಪರವಾಗಿ ಅಭಿನಂದಿಸಿದರು .
ವರದಿ :ದಾಮೋದರ ಮೊಗವೀರ ನಾಯಕವಾಡಿ
Kshetra Samachara
10/08/2021 07:14 pm