ಬ್ರಹ್ಮಾವರ: ರೋಟರಿ ಸಂಸ್ಥೆಯ ಜ್ಞಾನದೀವಿಗೆ ಕಾರ್ಯಕ್ರಮದಡಿ ರಾಜ್ಯಾದ್ಯಂತ ಉಚಿತವಾಗಿ ಟ್ಯಾಬ್ ಹಂಚಿಕೆ ಮಾಡಲಾಗುತ್ತಿದೆ. ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಮಟಪಾಡಿ ಶ್ರೀನಿಕೇತನ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂದು ಉಚಿತ ಟ್ಯಾಬ್ ಗಳನ್ನು ವಿತರಿಸಲಾಯಿತು. ಹತ್ತನೇ ತರಗತಿಯ 28 ಮಕ್ಕಳ ಬಳಕೆಗೆ 14 ಟ್ಯಾಬ್ ಗಳನ್ನು ಹಂಚಿಕೆ ಮಾಡಲಾಗಿದ್ದು, ಕೊರೊನಾ ಬ್ಯಾಚ್
ಆಗಿರುವುದರಿಂದ ವಿದ್ಯಾರ್ಥಿಗಳ ಉಪಯೋಗಕ್ಕೆ ಈ ಟ್ಯಾಬ್ ಬಳಕೆಯಾಗಲಿವೆ.
ರೋಟರಿ ಸಂಸ್ಥೆಯ ಉಪ ಗವರ್ನರ್ ಜೋನ್2 ದೇವದಾಸ ಶೆಟ್ಟಿಗಾರ್, ಬ್ರಹ್ಮಾವರ ತಾಲೂಕು ಶಿಕ್ಷಣ ಇಲಾಖೆಯ ಸಂಯೋಜಕ ಪ್ರಕಾಶ್, ಉಡುಪಿ ರೋಟರಿ ಅಧ್ಯಕ್ಷೆ ರಾಧಿಕಾ ಲಕ್ಷ್ಮೀನಾರಾಯಣ, ಕಾರ್ಯದರ್ಶಿ ದೀಪಾ ಭಂಡಾರಿ, ಗುರುರಾಜ್ ಭಟ್, ದಿನೇಶ್ ಭಂಡಾರಿ ಲಕ್ಷ್ಮೀನಾರಾಯಣ, b v ರಾಮಚಂದ್ರ ಉಪಾಧ್ಯಾಯ, ಪ್ರೌಢಶಾಲೆ ಮುಖ್ಯೋಪಾಧ್ಯಾಯ ಅಶೋಕ್ ಕುಮಾರ್ ಶೆಟ್ಟಿ, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕ ದಿನಕರ ಶೆಟ್ಟಿ ಬೈಕಾಡಿ ನಿರೂಪಿಸಿದರು.
ರೋಟರಿ ಸದಸ್ಯರು ಉಪಸ್ಥಿತರಿದ್ದರು.
Kshetra Samachara
10/02/2021 12:15 pm