ಉಪ್ಪಿನಂಗಡಿ: ಇಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಹಾಗೂ ಕೇಸರಿ ವಿವಾದ ತಾರಕ್ಕಕ್ಕೇರಿದ್ದು, ಘಟನೆಯನ್ನು ವರದಿ ಮಾಡಲು ಮಾಧ್ಯಮದವರ ಮೇಲೆನೇ ಕೆಲ ವಿದ್ಯಾರ್ಥಿಗಳು ಹಲ್ಲೆಗೆ ಮುಂದಾದ ಘಟನೆ ಗುರುವಾರ ನಡೆದಿದೆ.
ಹಿಜಾಬ್ ಕುರಿತಾಗಿ ಮೃಧು ಧೋರಣೆ ತೋರಿಸಲಾಗುತ್ತಿದೆ ಎಂದು ಆರೋಪಿಸಿ ಒಂದು ಗುಂಪಿನ ಪರವಾದ ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬಂದಿದ್ದು, ಅವರು ಕಾಲೇಜು ವರಾಂಡದಲ್ಲಿ ಗುಂಪಾಗಿ ನಿಂತಿದ್ದರು. ಆಗ ಹಿಜಾಬ್ ಪರವಾದ ಗುಂಪೊಂದು ಅಲ್ಲೇ ಜಮಾಯಿಸಿತ್ತು.
ಈ ಬಗ್ಗೆ ಸುದ್ದಿ ತಿಳಿದ ಮಾಧ್ಯಮದವರು ಕಾಲೇಜಿಗೆ ಹೋಗಿದ್ದು, ಹಿಜಾಬ್ ಪರ ಇರುವ ವಿದ್ಯಾರ್ಥಿಗಳ ಗುಂಪು ಏಕಾಏಕಿ ಮಾಧ್ಯಮದವರ ಮೇಲೆ ಹಲ್ಲೆಗೆ ಮುಂದಾಗಿದ್ದು, ವರದಿಗಾಗಿ ತೆಗೆಯಲಾಗಿದ್ದ ವೀಡಿಯೋವನ್ನು ಕಾಲೇಜಿನ ಕಚೇರಿಯ ಕೊಠಡಿಯಲ್ಲಿ ಮಾಧ್ಯಮದವರನ್ನು ಕೂಡಿಹಾಕಿ ಒತ್ತಾಯ ಪೂರ್ವಕವಾಗಿ ವೀಡಿಯೋ ಡಿಲೀಟ್ ಮಾಡಿ, ಬೆದರಿಕೆಯನ್ನು ಹಾಕಿದರು.
ಈ ಘಟನೆ ಬಗ್ಗೆ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದರೂ ಅಲ್ಲೇ ಇದ್ದ ಪೊಲೀಸರು ಸ್ಥಳಕ್ಕೆ ತೆರಳದೇ ಮೌನವಾಗಿದ್ದರು.
PublicNext
02/06/2022 02:57 pm