ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಹಿಜಾಬ್ ಹಾಕಿ ಬರಲು ಅವಕಾಶ ಕೊಡಿ : ಉರ್ದು ಶಾಲೆಯಲ್ಲಿ ಪೋಷಕರ ಪಟ್ಟು

ಕಾಪು: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಲ್ಲಾರು ಗ್ರಾಮದ ಸರಕಾರಿ ಸಂಯುಕ್ತ ಉರ್ದು ಪ್ರೌಢಶಾಲೆಯಲ್ಲಿ ಇವತ್ತು ಹಿಜಾಬ್ ವಿಚಾರವಾಗಿ ಗೊಂದಲ ಏರ್ಪಟ್ಟಿತು.ಇಲ್ಲಿ ಬಹುತೇಕ ಮುಸ್ಲಿಂ ವಿದ್ಯಾರ್ಥಿಗಳೇ ಕಲಿಯುತ್ತಿದ್ದು ಈ ಹಿಂದಿನಿಂದಲೂ ಹಿಜಾಬ್ ಹಾಕಿಕೊಂಡು ಬರುತ್ತಿದ್ದಾರೆ.ಆದರೆ ಇವತ್ತು ಇಲ್ಲಿನ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ,ಹಿಜಾಬ್ ಕಳಚಿಟ್ಡು ಬರುವಂತೆ ಮನವಿ ಮಾಡಿದ್ದಾರೆ.ಆದರೆ ಹಿಜಾಬ್ ಕಳಚಿ ತರಗತಿಗೆ ಹೋಗಲು ಪೋಷಕರು ಆಕ್ಷ್ಷೇಪ ವ್ಯಕ್ತಪಡಿಸಿದರು.ಈ ವೇಳೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಈ ಕುರಿತು ಮಾತನಾಡಿದ ಪೋಷಕರು ,ಇದು ಒಂದೂವರೆ ಶತಮಾನ ಕಂಡ ಶಾಲೆ.ಇಲ್ಲಿ ಶೇ.90 ಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿಗಳೇ ಕಲಿಯುತ್ತಿದ್ದಾರೆ.ಇವರು ಹಿಜಾಬ್ ಧರಿಸಿವುದರಿಂದ ಯಾರಿಗೂ ಸಮಸ್ಯೆ ಆಗಿಲ್ಲ.ಈಗ ದಿಢೀರ್ ಎಂದು ಹಿಜಾಬ್ ತೆಗೆದು ಹೋಗಲು ಹೇಳಿತ್ತಿದ್ದಾರೆ ,ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.ಶಾಲೆಗೆ ಸ್ಥಳೀಯ ತಹಶೀಲ್ದಾರ್ ಆಗಮಿಸಿ ಪರಿಶೀಲನೆ ನಡೆಸಿದರು. ಶಾಲಾವರಣದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು ಭದ್ರತೆ ಕಲ್ಪಿಸಲಾಗಿದೆ.

Edited By : Manjunath H D
Kshetra Samachara

Kshetra Samachara

15/02/2022 04:53 pm

Cinque Terre

7.93 K

Cinque Terre

1

ಸಂಬಂಧಿತ ಸುದ್ದಿ