ಉಡುಪಿ: ಕೇವಲ ಆರು ಜನರಿಗೋಸ್ಕರ ನಮ್ಮ ಭವಿಷ್ಯ ಹಾಳಾಗುತ್ತಿದೆ.ತಕ್ಷಣ ಕಾಲೇಜು ಪ್ರಾರಂಭಿಸಿ ಎಂದು ಪಿಯು ಕಾಲೇಜು ವಿದ್ಯಾರ್ಥಿನಿಯೊಬ್ಬಳು ಮನವಿ ಸಲ್ಲಿಸಿದ್ದಾಳೆ.
ಇವತ್ತು ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಆಗಮಿಸಿದ ಪಿಯು ವಿದ್ಯಾರ್ಥಿನಿ ಶಿಲ್ಪಾ ,ನಾನು ಕಾಲೇಜು ಬೇಗ ಆರಂಭಿಸುವಂತೆ ಮನವಿ ಸಲ್ಲಿಸಿದ್ದೇನೆ. ಕೇವಲ ಆರು ವಿದ್ಯಾರ್ಥಿನಿಯರಿಂದಾಗಿ ಎಲ್ಲರಿಗೂ ತೊಂದರೆಯಾಗಬಾರದು. ನಾನಿಲ್ಲಿ ಹೈಸ್ಕೂಲಿನಿಂದ ವ್ಯಾಸಂಗ ಮಾಡುತ್ತಿದ್ದೇನೆ.
ಇಷ್ಟರವರೆಗೂ ಯಾವುದೇ ಸಮಸ್ಯೆ ಈ ಕಾಲೇಜಿನಲ್ಲಿ ಇರಲಿಲ್ಲ.ಈಗ ದಿಢೀರ್ ಅಂತ ಪ್ರಾರಂಭಗೊಂಡಿದೆ.ಇದರಿಂದ ನೂರಾರು ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿದೆ.ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೇಗ ಕಾಲೇಜು ಪ್ರಾರಂಭಿಸುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾಳೆ.
Kshetra Samachara
14/02/2022 03:32 pm