ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರಿನ ರುತ್ ಕ್ಲ್ಯಾರ್ ಡಿಸಿಲ್ವ ಸಿಎ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ

ಮಂಗಳೂರು: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿರುವ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಮಂಗಳೂರಿನ ರುತ್ ಕ್ಲ್ಯಾರ್ ಡಿಸಿಲ್ವ ದೇಶಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದಾರೆ. ಈ ಮೂಲಕ‌ ಸಿಎ ಪರೀಕ್ಷೆಯಲ್ಲಿ ಇದೇ ಮೊದಲ ಬಾರಿಗೆ ಮಂಗಳೂರಿಗೆ ಪ್ರಥಮ ರ‍್ಯಾಂಕ್ ಲಭಿಸಿದೆ.

ಮಂಗಳೂರಿನ ರೋಸಿ ಮಾರಿಯಾ ಡಿಸಿಲ್ವಾ ಮತ್ತು ರಫರ್ಟ್ ಡಿಸಿಲ್ವಾ ದಂಪತಿಯ ಪುತ್ರಿಯಾಗಿರುವ ರುತ್ ಕ್ಲ್ಯಾರ್ ಡಿಸಿಲ್ವ ಈ ಹಿಂದೆ ಎರಡು ಬಾರಿ ಸಿಎ ಪರೀಕ್ಷೆಯನ್ನು ಎದುರಿಸಿದ್ದರು. ಆದರೆ ಫಲಿತಾಂಶ ದೊರಕಿರಲಿಲ್ಲ. ಅವರು ಮತ್ತೆ ಛಲ ಬಿಡದೆ ಪರೀಕ್ಷೆಯನ್ನು ಎದುರಿಸಿ ಮೂರನೆಯ ಬಾರಿ ರಾಷ್ಟ್ರಮಟ್ಟದಲ್ಲಿಯೇ ಮೊದಲ ಸ್ಥಾನ ಪಡೆದಿದ್ದಾರೆ.

ಈ ಬಾರಿ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ. ಅಲ್ಲದೆ ಮಂಗಳೂರಿಗೆ ಹೆಮ್ಮೆ ತಂದಿದೆ. ನಾಲ್ಕು ವರ್ಷಗಳ ಹಿಂದೆ ಸಿಪಿಟಿ ಪರೀಕ್ಷೆಯಲ್ಲಿ ರುತ್ ಜಿಲ್ಲೆಗೆ ಪ್ರಥಮ ರ್ಯಾಂಕ್ ಗಳಿಸಿದ್ದರು. ಸೈಂಟ್ ತೆರೆಸಾ ಶಾಲೆಯಲ್ಲಿ ಶಾಲಾ ವಿದ್ಯಾಭ್ಯಾಸ ಪೂರೈಸಿರುವ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ದೂರ ಶಿಕ್ಷಣದ ಮೂಲಕ ಪದವಿ ಶಿಕ್ಷಣ ಪಡೆದಿದ್ದಾರೆ.

Edited By : Vijay Kumar
Kshetra Samachara

Kshetra Samachara

13/09/2021 09:39 pm

Cinque Terre

10.55 K

Cinque Terre

7

ಸಂಬಂಧಿತ ಸುದ್ದಿ