ಮುಲ್ಕಿ: ಕೆಥೋಲಿಕ್ ಕ್ರೈಸ್ತರ ತೆನೆ ಹಬ್ಬ(ಮೋಂತಿ ಪೆಸ್ತ್) ಹಾಗೂ ಮಾತೆ ಮರಿಯಮ್ಮ ನವರ ಜನ್ಮ ದಿನಾಚರಣೆಗೆ ಪೂರ್ವಭಾವಿಯಾಗಿ ಮುಲ್ಕಿ ಇಮ್ಯಾಕ್ಯುಲೇಟ್ ಕಂಸೆಪ್ಶನ್ ಚರ್ಚ್ ನಲ್ಲಿ ಭಾನುವಾರ ವಿಶೇಷ ಪೂಜೆ ಹಾಗೂ ಮಕ್ಕಳಿಂದ ಪುಷ್ಪಾರ್ಚನೆ ಕಾರ್ಯಕ್ರಮ ನಡೆಯಿತು.
ಚರ್ಚ್ ಧರ್ಮಗುರುಗಳಾದ ವಂ. ಸಿಲ್ವೆಸ್ಟರ್ ಡಿಕೋಸ್ಟಾ ಪ್ರಾರ್ಥನೆ ಸಲ್ಲಿಸಿದರು. ಅನಾರೋಗ್ಯ ಪೀಡಿತರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಮಕ್ಕಳು ಪುಷ್ಪಾರ್ಚನೆ ಸಲ್ಲಿಸಿದರು. ಶಿಕ್ಷಕರ ದಿನಾಚರಣೆಯ ಪೂರ್ವಭಾವಿಯಾಗಿ ಮುಲ್ಕಿ ಧರ್ಮ ಸಭಾ ವ್ಯಾಪ್ತಿಯಲ್ಲಿ ಬರುವ ಸುಮಾರು 50ಕ್ಕೂ ಅಧಿಕ ಶೈಕ್ಷಣಿ ಮತ್ತು ಧಾರ್ಮಿಕ ಬೋಧನಾ ಶಿಕ್ಷಕರು ಮತ್ತು ಧರ್ಮ ಭಗಿನಿಯರನ್ನು ಗೌರವಿಸಲಾಯಿತು.
ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಓಸ್ವಲ್ಡ್ ಕೊರೆಯಾ , ಕಾರ್ಯದರ್ಶಿ ಜೊವಿನ್ ಪ್ರಕಾಶ್ ಡಿಸೋಜ, ವಾರ್ಡ್ ಗುರಿಕಾರರು ಹಾಗೂ ಸಭಾ ಸದಸ್ಯರು ಹಾಜರಿದ್ದರು.
Kshetra Samachara
04/09/2022 10:22 am