ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಸ್ ಕೋಡಿ: 'ಕುಲಾಲ ಸಮಾಜ ಶೈಕ್ಷಣಿಕವಾಗಿ ಅರ್ಥಿಕವಾಗಿ ಸದೃಢರಾಗಬೇಕು'

ಮುಲ್ಕಿ: ಕುಲಾಲ ಸಮಾಜ ಶೈಕ್ಷಣಿಕವಾಗಿ ಅರ್ಥಿಕವಾಗಿ ಸೃದಡರಾಗಬೇಕು , ಇದಕ್ಕೆ ಮುಖ್ಯವಾಗಿ ಸಂಘಟನೆಯು ಬಲವಾಗಿ ಬೆಳೆಯಬೇಕು ಎಂದು ದ. ಕ. ಜಿಲ್ಲಾ ಮೂಲ್ಯ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಹೇಳಿದರು.

ಅವರು ಎಸ್. ಕೋಡಿಯ ಕುಲಾ ಸಮಾಜ ಸೇವಾಸಂಘದ ಆಶ್ರಯದಲ್ಲಿ ಕುಲಾಲ ಜವನೆರ್ ತೋಕೂರು ಸಂಯೋಜನೆಯಲ್ಲಿ ವಿದ್ಯಾರ್ಥಿ ಸಹಾಯಧನ ವಿತರಣೆ ಮತ್ತು ಪ್ರತಿಭಾ ಪುಸ್ಕಾರ, ಸಾಧಕರಿಗೆ ಸಮ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತಾನಾಡಿ ಯುವ ಸಂಘಟನೆ ಜಿಲ್ಲೆಯಲ್ಲಿ ಮಾದರಿಯಾಗಿದೆ ಎಂದರು.

ದ. ಕ. ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಮ್ ಆರ್‌ಪಿಎಲ್ ಸಂಸ್ಥೆಯ ವಿತ್ತ ವಿಭಾಗದ ಪ್ರಬಂಧಕ ಜಯೇಶ್ ಗೋವಿಂದ್, ಮೆಕಾನಿಕಲ್ ವಿಭಾಗದ ಚೀಫ್ ಮ್ಯಾನೇಜರ್ ಗಣೇಶ್ ಎಮ್, ಉದ್ಯಮಿ ಶ್ರೀನಾಥ್ , ಮುಂಬಯಿ ಕುಲಾಲ ಮಹಿಳಾ ಮಂಡಳಿಯ ಅಧ್ಯಕ್ಷೆ ಮಮತಾ ಗುಜರನ್, ತೋಕೂರು ಕುಲಾಲ್ ಸಂಘದ ಅಧ್ಯಕ್ಷ ಆನಂದ ಸಾಲ್ಯಾನ್, ಮಹಿಳಾ ಮಂಡಳಿಯ ಅಧ್ಯಕ್ಷೆ ಲೀಲಾ ಬಂಜನ್ ಮತ್ತಿತರರು ಉಪಸ್ಥಿತರಿದ್ದರು.

ಸಾಧಕರ ನೆಲೆಯಲ್ಲಿ ಕಸ್ತೂರಿ ಪಂಜ , ನಾಟಕಕಾರ ಸುಧಾಕರ ಸಾಲ್ಯಾನ್ ಸಂಕಲಕರಿಯ, ಚಿತ್ರಕಾರ ಯಶ್ಮಿತ್ ಕುಲಾಲ್ ಅವರನ್ನು ಗೌರವಿಸಲಾಯಿತು. ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ , ವಿದ್ಯಾರ್ಥಿ ಸಹಾಯಧನ ವಿತರಣೆ ನಡೆಯಿತು. ಕುಲಾಲ್ ಜವನೆರ್ ಸಂಘಟನೆಯ ಹೇಮಂತ್ ಕುಮಾರ್ ಕಿನ್ನಿಗೋಳಿ ಸ್ವಾಗತಸಿದರು. ಜಗದೀಶ್ ವರದಿ ವಾಚಿಸಿದರು. ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

28/08/2022 08:13 pm

Cinque Terre

1.38 K

Cinque Terre

0

ಸಂಬಂಧಿತ ಸುದ್ದಿ