ಕಟೀಲು: ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಮಂಡಳಿಯ ಆರೂ ಮೇಳಗಳ ಈ ವರುಷದ ತಿರುಗಾಟ ಪತ್ತನಾಜೆಯ ಮರುದಿನ ಬುಧವಾರ ಸಂಪನ್ನಗೊಂಡಿತು.
300 ಕಲಾವಿದರು ಸಹಾಯಕರನ್ನೊಳಗೊಂಡ ಬ್ರಹತ್ ಯಕ್ಷಗಾನ ಸಮೂಹವನ್ನು ಪೋಷಿಸುತ್ತ ಭಕ್ತರ ಹರಕೆ ಸೇವೆಯಾಟಗಳ ಮೂಲಕ ಪೊರೆಯುತ್ತ ಬಂದ ಕಟೀಲು ಭ್ರಮರಾಂಬೆಯ ದಿವ್ಯ ಸನ್ನಿಧಿಯಲ್ಲಿ ಸಹಸ್ರಾರು ಕಲಾಭಿಮಾನಿಗಳು ಭಕ್ತಸಮೂಹ ಕಲಾವಿದರ ಕುಟುಂಬದ ಸದಸ್ಯರು ಈ ವಿಶೇಷ ಸನ್ನಿವೇಷಕ್ಕೆ ಸಾಕ್ಷಿಯಾಗಿ ಧನ್ಯರಾದರು.
ಕಟೀಲು ರಥಬೀದಿಯಲ್ಲಿ ಆರೂ ಮೇಳಗಳ ದೇವರಿಗೆ ಪೂಜೆ ನಡೆದು ಆರೂ ರಂಗಸ್ಥಳಗಳಲ್ಲಿ ಪೂರ್ವರಂಗ ಪ್ರದರ್ಶನಗೊಂಡು ದೇವರು ರಂಗಸ್ತಳಕ್ಕೆ ಬಂದ ಬಳಿಕ ದಶಾವತಾರ ಹಾಗೂ ಶ್ರೀನಿವಾಸ ಕಲ್ಯಾಣವನ್ನು ಪ್ರದರ್ಶಿಸಲಾಯಿತು.
Kshetra Samachara
26/05/2022 08:51 am