ಕಾರ್ಕಳ : ಮಕ್ಕಳಲ್ಲಿ ಸೃಜನಶೀಲತೆ ಮೂಡಿಸುವ ನಿಟ್ಟಿನಲ್ಲಿ ಚಿಣ್ಣರ ಮೇಳ ಪೂರಕ. ಇಂತಹ ಶಿಬಿರಗಳಲ್ಲಿ ಮನಸ್ಸು ಕಟ್ಟುವ ಕಾರ್ಯವಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಥಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವಾ ಅಭಿಪ್ರಾಯಪಟ್ಟರು.
ಅವರು ಕೋಟಿ ಚೆನ್ನಯ ಥೀಮ್ ಪಾರ್ಕ್‌ನಲ್ಲಿ ಯಕ್ಷರಂಗಾಯಣ ಆಶ್ರಯದಲ್ಲಿ ಜೀವನ್ ರಾಂ ಸುಳ್ಯ ನಿರ್ದೇಶನದಲ್ಲಿ ನಡೆಯುತ್ತಿರುವ ಚಿಣ್ಣರ ಮೇಳ - 2022 ಉದ್ಘಾಟಿಸಿ ಮಾತನಾಡಿದರು.
ಸಚಿವ ಸುನೀಲ್ ಕುಮಾರ್ ಕಾರ್ಕಳದಲ್ಲಿ ಯಕ್ಷರಂಗಾಯಣ ಆರಂಭಿಸಿರುವುದು ಸಂತೋಷ ಸಂಗತಿ. ಮುಂದಿನ ದಿನಗಳಲ್ಲಿ ಸುನೀಲ್ ಅವರ ಮಾರ್ಗದರ್ಶನ, ಯಕ್ಷರಂಗಾಯಣ ನಿರ್ದೇಶಕ ಜೀವನ್ ರಾಂ ಸುಳ್ಯ ಅವರ ನಿರ್ದೇಶನದಲ್ಲಿ ಕಾರ್ಕಳ ಯಕ್ಷ ರಂಗಾಯಣ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿಗೆ ಬರಲಿದೆ ಎಂದು ಹೇಳಿದ ಆಳ್ವರು ಸುನೀಲ್ ಕುಮಾರ್ ಅವರ ಇಚ್ಛಾಶಕ್ತಿ, ಕಾರ್ಯಶೈಲಿ ಕುರಿತು ಗುಣಗಾನ ಮಾಡಿದರು.
Kshetra Samachara
09/05/2022 07:37 pm