ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಗಂಡುಕಲೆಯಲ್ಲಿ ಹೆಮ್ಮಕ್ಕಳ ಕಲರವ!

ಕಾರ್ಕಳ: ಹಿಂದೆಲ್ಲ ಯಕ್ಷಗಾನವನ್ನು ಗಂಡು ಕಲೆ ಎಂದೇ ಕರೆಯಲಾಗುತ್ತಿತ್ತು.ಆದರೆ ಈಗ ಚಿತ್ರಣ ಬದಲಾಗಿದೆ.ಹೆಮ್ಮಕ್ಕಳೂ ಯಕ್ಷಗಾನದ ಪೋಷಾಕು ತೊಟ್ಟು ಗಂಡುಮಕ್ಕಳಿಗಿಂತ ತಾವೇನೂ ಕಮ್ಮಿ‌ ಇಲ್ಲ ಎಂಬಂತೆ ನಟನೆಯಲ್ಲಿ ತೊಡಗಿದ್ದಾರೆ.

ಕಾರ್ಕಳದ ಶ್ರೀ ಗುರು ರಾಘವೆಂದ್ರ ಸೇವಾ ಟ್ರಸ್ಟ್ ನಿಂದ ಶ್ರೀ ದುರ್ಗಾ ಯಕ್ಷಗಾನ ತರಬೇತಿ ಕೇಂದ್ರ ಲವು ಹೆಣ್ಣುಮಕ್ಕಳಿಗೆ ಯಕ್ಷ ತರಬೇತಿ ನೀಡುತ್ತಿದೆ.ಇಲ್ಲಿನ ಕುಕ್ಕುಂದೂರಿನ ಅಯ್ಯಪ್ಪನಗರದ ವಿಜೇತ ವಿಶೇಷ ಶಾಲಾ ಕಟ್ಟಡದಲ್ಲಿ ಹೆಣ್ಣು ಮಕ್ಕಳುಗೆ ಯಕ್ಷಗಾನದ ಪಟ್ಟುಗಳನ್ನು‌ ಕಲಿಸಲಾಗುತ್ತಿದೆ.

ಕಾರ್ಕಳದಲ್ಲಿ ಹೆಣ್ಣುಮಕ್ಕಳ 2 ತಂಡಗಳಿದ್ದು ಇಲ್ಲಿ ಬಡಗುತಿಟ್ಟು ಯಕ್ಷಗಾನ ಕಲಿಸಲಾಗುತ್ತಿದೆ. ಯಕ್ಷಗುರು ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿಯವರು ಇವರಿಗೆ ತರಬೇತಿ‌ ನೀಡುತ್ತಿದ್ದಾರೆ.ಇನ್ನು ಬಂಟರ ಸಂಘ ಕಾರ್ಕಳದ ವತಿಯಿಂದಲೂ ತೆಂಕು ತಿಟ್ಟು ಯಕ್ಷಗಾನ ಕಲಿಸಲಾಗುತ್ತಿದೆ.

ಗುರುಗಳಾದ ಶಿವಕುಮಾರ್ ಮೂಡಬಿದ್ರಿ ತೆಂಕುತಿಟ್ಟು ಹಾಗೂ ಬಡಗು ತಿಟ್ಟು ವಿನಲ್ಲಿ ಕಲಿಸುತ್ಯಿದ್ದಾರೆ. 2 ತಂಡಗಳಲ್ಲಿಯೂ ಮುಖ್ಯ ಪಾತ್ರಗಳಲ್ಲಿ ಬಹುತೇಕ 2 ತಂಡದ ವಿದ್ಯಾರ್ಥಿಗಳೂ ಇದ್ದಾರೆ. ಒಟ್ಟಿನಲ್ಲಿ ಯಕ್ಷಗಾನ ಕಲೆಯಲ್ಲಿ ಆಸಕ್ತಿ ಇರುವ ಶಿಕ್ಷಕಿಯರು, ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಗಂಡು ಕಲೆ ಯಕ್ಷಗಾನ ಕಲಿಕೆಯಲ್ಲಿ ತೊಡಗಿಸಿಕೊಂಡು ಪ್ರದರ್ಶನವನ್ನೂ ನೀಡುತ್ತಿದ್ದಾರೆ.

Edited By : Shivu K
Kshetra Samachara

Kshetra Samachara

24/04/2022 10:44 am

Cinque Terre

12.19 K

Cinque Terre

0

ಸಂಬಂಧಿತ ಸುದ್ದಿ