ಮುಲ್ಕಿ: ಕಿನ್ನಿಗೋಳಿ ಸಮೀಪದ ಸುರಗಿರಿ ಯುವಕ ಮಂಡಲದ ವತಿಯಿಂದ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 51 ನೇ ವರ್ಷದ ಭಜನಾ ಮಂಗಲೋತ್ಸವ ನಡೆಯಿತು.
ಕಳೆದ ಒಂದು ತಿಂಗಳು ನಗರ ಸಂಕೀರ್ತನೆ ಯೊಂದಿಗೆ ಸುಮಾರು 1000 ಕ್ಕಿಂದಲ್ಲೂ ಹೆಚ್ಚು ಮನೆಗಳಿಗೆ ಭೇಟಿ ನೀಡಿದ್ದು, ಮಕರ ಸಂಕ್ರಮಣದ ದಿನ ಅಂದರೆ ಶುಕ್ರವಾರ ಸಮಾಪನೆಗೊಂಡಿತು.
ಹಲವು ಭಜನಾ ತಂಡಗಳು ಭಜನಾ ಮಂಗಲೋತ್ಸವದಲ್ಲಿ ಪಾಲ್ಗೊಂಡವು. ಶಾಸಕ ಉಮಾನಾಥ ಕೋಟ್ಯಾನ್ ಸಹಿತ ಹಲವಾರು ಗಣ್ಯರು ಭಜನಾ ಮಂಗಲೋತ್ಸವ ದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
Kshetra Samachara
15/01/2022 11:32 am