ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ದಲಿತ ಕಾಲೊನಿಯಲ್ಲಿ ಸಚಿವ ಕೋಟ 'ಗೋ ಪೂಜೆ'; ಗೋ ಪೋಷಕರಿಗೆ ಗೌರವಾರ್ಪಣೆ

ಉಡುಪಿ: ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಇಂದು ಉಡುಪಿಯ ಪರಿಶಿಷ್ಟ ಪಂಗಡದವರ ಕಾಲೊನಿಯಲ್ಲಿ ಗೋ ಪೂಜೆ ನೆರವೇರಿಸಿದರು.

ಉಡುಪಿ ದೊಡ್ಡಣಗುಡ್ಡೆಯಲ್ಲಿರುವ ಅಂಬೇಡ್ಕರ್ ಕಾಲೊನಿಯಲ್ಲಿ ಕೇವಲ ಮೂರು ಸೆಂಟ್ಸ್ ಜಾಗದಲ್ಲಿ ಸುಮಾರು 60 ಶುದ್ಧ ದೇಶಿ ಹಸುಗಳನ್ನು ಯಾವುದೇ ಲಾಭದ ಉದ್ದೇಶವಿಲ್ಲದೆ ಪೋಷಿಸುತ್ತಿರುವ ದಲಿತ ವಿಧವೆ ಕಮಲಮ್ಮ ಅವರ ಗೋ ಶಾಲೆಗೆ ಶಾಸಕ‌ ರಘುಪತಿ ಭಟ್ ಜೊತೆ ಆಗಮಿಸಿದ ಸಚಿವರು ಗೋವಿನ ಪಾದಕ್ಕೆ ನೀರೆರೆದು, ಹಣೆಗೆ ಅರಿಶಿನ‌ ಕುಂಕುಮ ಹಚ್ಚಿ , ಮೈಮೇಲೆ ಸೀರೆ ರವಿಕೆ ಕಣ ಪುಷ್ಪಮಾಲೆ ಹಾಕಿ ಅವಲಕ್ಕಿ , ಅರಳು ಮಿಶ್ರಿತ ಕಜ್ಜಾಯವನ್ನು ಅರ್ಪಿಸಿ ಮಂಗಳಾರತಿ ಬೆಳಗಿದರು.

ಪುರೋಹಿತ ಪದ್ಮನಾಭ ಆಚಾರ್ಯರು ಪೂಜಾವಿಧಿ ನೆರವೇರಿಸಿದರು. ಉಳಿದ ಹಸುಗಳಿಗೂ ಗೋಗ್ರಾಸ ನೀಡಲಾಯಿತು. ಬಳಿಕ ಸಾಮೂಹಿಕ ಪ್ರಾರ್ಥನೆ ನಡೆಯಿತು

ನಂತರ ಇಲಾಖೆಯ ವತಿಯಿಂದ ಕಮಲಮ್ಮ ಮತ್ತು ಅವರ ಮಗನಿಗೆ ಸಚಿವರು, ಹೊಸ ಬಟ್ಟೆ ಮತ್ತು ಸಿಹಿತಿಂಡಿಯನ್ನು ಹಾಗೂ ಹಸುಗಳಿಗೆ ಒಂದು ಕ್ವಿಂಟಾಲ್ ಹಿಂಡಿಯನ್ನು ಉಡುಗೊರೆಯಾಗಿ ನೀಡಿದರು.

Edited By : Nagesh Gaonkar
Kshetra Samachara

Kshetra Samachara

05/11/2021 05:09 pm

Cinque Terre

15.53 K

Cinque Terre

0

ಸಂಬಂಧಿತ ಸುದ್ದಿ