ವರದಿ ; ದಾಮೋದರ ಮೊಗವೀರ ನಾಯಕವಾಡಿ
ಬೈಂದೂರು : ನವರಾತ್ರಿಯ ಸಂದರ್ಭದಲ್ಲಿ ಕರಾವಳಿಯ ಭಾಗದಲ್ಲಿ ಕಂಡು ಬರುವ ಪುರಾತನವಾದ ಶೈಲಿಯ ಹೂವಿನ ಕೋಲು ಆಚರಣೆ.
ಬೆರಳೆಣಿಕೆಯ ಜನ ಈಗಲೂ ಅದನ್ನ ಮುಂದುವರೆಸಿಕೊಂಡು ಬರುತ್ತಿದ್ದಾರೆ.
ಹೌದು ಕಳೆದ 80 ವರ್ಷಗಳಿಂದ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಹೂವಿನ ಕೋಲು ಸೇವೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ ಬೈಂದೂರು ತಾಲ್ಲೂಕಿನ ಮರವಂತೆ "ದಾಸ" ಕುಟುಂಬ.
60- 70ರ ದಶಕದಲ್ಲಿ ಯಕ್ಷರಂಗವನ್ನಾಳಿದ ದಿಗ್ಗಜರು ಮರವಂತೆಯ ನರಸಿಂಹ ದಾಸ್ ಭಾಗವತರು ಹಾಗೂ ಶ್ರೀನಿವಾಸ (ಶೀನ್) ದಾಸ್ ಭಾಗವತರೆಂಬ ಸಹೋದರರು ಯಕ್ಷ ರಂಗದಲ್ಲಿ ದಾಸ ಶೈಲಿಯನ್ನು ಹುಟ್ಟುಹಾಕಿದರು .
ಶೀನ್(ಶ್ರೀನಿವಾಸ್ ದಾಸರ) ಪುತ್ರರಲ್ಲಿ ಕ್ರಷ್ಣ ದಾಸ್ ಮತ್ತು ರಾಮದಾಸ್ ಯಕ್ಷ ರಂಗದಲ್ಲಿ ಗುರುತಿಸಿಕೊಂಡಿದ್ದು. ನರಸಿಂಹ ದಾಸರ ಪುತ್ರರಲ್ಲಿ ದೇವರಾಜ್ ದಾಸ್ ಕೂಡ ಯಕ್ಷರಂಗದ ಭಾಗಾವತಿಕೆಯಲ್ಲಿ ಹೆಸರು ಮಾಡಿದ್ದಾರೆ. ಹಿರಿಯರಿಂದ ಪ್ರಾರಂಭಗೊಂಡ ಈ ಹೂವಿನ ಕೋಲು ಸೇವೆಯನ್ನು ಇವರು ಕಳೆದ 21 ವರ್ಷಗಳಿಂದ ಹೆಚ್ಚಿನ ಮುತುವರ್ಜಿಯಲ್ಲಿ ನಡೆಯುತ್ತಿದೆ.
ನವರಾತ್ರಿಯ ಮೊದಲನೇ ದಿನವಾದ ಇಂದು 81ನೇ ವರ್ಷದ ತಿರುಗಾಟವನ್ನು ಮರವಂತೆಯ ಶ್ರೀ ಮಹಾರಾಜಸ್ವಾಮಿ ದೇವಸ್ಥಾನದಲ್ಲಿ ಪ್ರಥಮ ಸೇವೆ ನೀಡಿ ಸುತ್ತಮುತ್ತಲ ಗ್ರಾಮಗಳ ತಿರುಗಾಟಕ್ಕೆ ಚಾಲನೆ ನೀಡಿದ್ದಾರೆ.
ಹೂವಿನ ಕೋಲು ಸೇವೆಯಲ್ಲಿ ದೇವರಾಜ ದಾಸ್ ಮರವಂತೆ .ಮದ್ದಳೆ ಪ್ರಶಾಂತ್ ಭಂಡಾರಿ ಶಂಕರನಾರಾಯಣ . ಬಾಲ ಕಲಾವಿದರಾಗಿ ಯಕ್ಷ ಹೆಜ್ಜೆ ತಂಡದ ಚಿರಾಗ್ ದಾಸ್ ಮರವಂತೆ . ಚಿಂತನ್ ಆಚಾರ್ಯ ಮರವಂತೆ .
Kshetra Samachara
08/10/2021 03:31 pm