ಮುಲ್ಕಿ: ಕೊಲಕಾಡಿ ಯಂತಹ ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಸಾಧನೆ ಅನನ್ಯವಾಗಿದ್ದು ಮುಂದಿನ ದಿನಗಳಲ್ಲಿ ದಾನಿಗಳ ಹಾಗೂ ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಮತ್ತಷ್ಟು ಸಾಧನೆಗೆ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಮುಲ್ಕಿ ಸಮೀಪದ ಅನುದಾನಿತ ಕೆ. ಪಿ. ಎಸ್. ಕೆ ಸ್ಮಾರಕ ಪೌಢಶಾಲೆ ಪಂಜಿನಡ್ಕ,
ವಿದ್ಯಾಪ್ರಚಾರಣಿ ಸಂಘ (ರಿ.) ಕೊಲೆಕಾಡಿ ಹಾಗೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಪ್ರಕೋಷ್ಟ, ಜಗದೀಶ್ ಆಚಾರ್ಯ, ಯು ಎಸ್ ಎ. ಹಾಗೂ ನಾರಾಯಣಿ ಸೇಸಪ್ಪ ಪ್ರಭು ಸ್ಮರಣಾರ್ಥ ಜಗದೀಶ್ ಪ್ರಭು ಹಾಗೂ ಸಹೋದರರು ಪಣಿಕೆರೆ ಪ್ರಾಯೋಜಕ್ವದಲ್ಲಿ 2021 ನೇ ಸಾಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ , ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರತಿಭಾ ವೇತನ ಮತ್ತು ದಾನಿಗಳಾದ ಮುಂಬೈ ಪ್ರತಿಭಾ ಸುಂದರ್ ರಾಜ್ ಪ್ರಾಯೋಜಕತ್ವದಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅತಿಕಾರಿ ಬೆಟ್ಟು ಗ್ರಾಪಂ ಅಧ್ಯಕ್ಷ ಮನೋಹರ ಕೋಟ್ಯಾನ್ ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಲಾ ಸಂಚಾಲಕ ಗಂಗಾಧರ್ ಶೆಟ್ಟಿ ಬೆರ್ಕೆ ತೋಟ. ಸಹಕಾರಿ ಪ್ರಕೋಷ್ಠದ ಸಂಚಾಲಕ ರಂಗನಾಥ ಶೆಟ್ಟಿ, ಮಂಡಲಾಧ್ಯಕ್ಷ ಸುನಿಲ್ ಆಳ್ವ ಅನಿಲ್ ಕೊಲಕಾಡಿ, ದಾನಿ ಸತೀಶ್ ಶೆಟ್ಟಿ, ಪ್ರಾಥಮಿಕ ಶಾಲೆಯ ಅಂಬರೀಶ್ ಲಮಾಣಿ,ಶಿಕ್ಷಕ ನೋಣಯ್ಯ ರೆಂಜಾಳ, ಗಿರಿಧರ್ ಕಾಮತ್ ಕೆದುಬರಿ, ಶ್ರೀಮಂತ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಗ್ರೆಟ್ಟಾ ರೋಡ್ರಿಗಸ್ ಸ್ವಾಗತಿಸಿದರು, ನಾಗಭೂಷಣ ಮಾಸ್ಟರ್ ನಿರೂಪಿಸಿದರು, ಹಳೆವಿದ್ಯಾರ್ಥಿ ನಿತಿನ್ ಪ್ರಕಾಶ್ ಧನ್ಯವಾದ ಅರ್ಪಿಸಿದರು.
ಕಳೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಹೇಮಾ ಚಿದಾನಂದ, ಸ್ವರ್ಣ, ಕೆ.ದೀಕ್ಷಾ ರವರನ್ನು ಗೌರವಿಸಲಾಯಿತು. ಬಳಿಕ ಪ್ರತಿಭಾ ಪುರಸ್ಕಾರ ಹಾಗೂ ಸಮವಸ್ತ್ರ ವಿತರಣೆ ಕಾರ್ಯಕ್ರಮ ನಡೆಯಿತು
Kshetra Samachara
04/09/2021 03:21 pm