ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ತೋಕೂರು ಸ್ಪೋರ್ಟ್ಸ್ ಕ್ಲಬ್‌ನಲ್ಲಿ "ತುಳುನಾಡ ಆಟಿದ ನೆಂಪು" ಕಾರ್ಯಕ್ರಮ

ಮುಲ್ಕಿ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು ಹಾಗೂ ಜಿಲ್ಲಾ, ರಾಜ್ಯ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ) ತೋಕೂರು, ಹಳೆಯಂಗಡಿ ಆಶ್ರಯದಲ್ಲಿ 4ನೇ ವರ್ಷದ "ತುಳುನಾಡ ಆಟಿದ ನೆಂಪು" ಕಾರ್ಯಕ್ರಮ ಸರಳವಾಗಿ ಹಾಗೂ ಸಾಂಕೇತಿಕವಾಗಿ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಸುರತ್ಕಲ್ ಗೋವಿಂದ ದಾಸ ಕಾಲೇಜು ಉಪನ್ಯಾಸಕ ಅಕ್ಷತಾ ನವೀನ್ ಶೆಟ್ಟಿ ಎಡ್ಮೆಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ತುಳುನಾಡಿನ ಪರಂಪರೆಯ ಪ್ರಕಾರ ಶುಭ ಕಾರ್ಯಗಳಿಗೆ ವಿರಾಮ ಇರುವ ಆಟಿ ತಿಂಗಳಲ್ಲಿನ ವಿಶೇಷ ಆಹಾರ ಪದ್ಧತಿ, ಆಟಿ ಕಳೆಂಜ, ಆಟಿ ಅಮಾವಾಸ್ಯೆ ಇವೆಲ್ಲದರ ವಿಶೇಷತೆಯ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ನಾಗೇಶ್ ಕುಲಾಲ್ ರವರು ಪೂರ್ವಿಕರು ಪಾಲಿಸಿಕೊಂಡು ಬಂದಂತಹ ಆಟಿ ತಿಂಗಳ ಆಚರಣೆಗಳನ್ನು ಮುಂದುವರೆಸಿಕೊಂಡು ಹೋಗಬೇಕಾದಂತಹ ಅಗತ್ಯತೆಯನ್ನು ತಿಳಿಸಿದರು. ಬಳಿಕ ತುಳುನಾಡ ಗ್ರಾಮೀಣ ಸೊಗಡಿನ ಸುಮಾರು 34 ಬಗೆಯ ವಿಶಿಷ್ಟ ಖಾದ್ಯಗಳನ್ನು ತಯಾರಿಸಿ ಉಣಬಡಿಸಿದರು.

Edited By : PublicNext Desk
Kshetra Samachara

Kshetra Samachara

02/08/2021 08:04 pm

Cinque Terre

3.62 K

Cinque Terre

0

ಸಂಬಂಧಿತ ಸುದ್ದಿ