ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೋಕೂರು: ಆಸ್ಕರ್ ಚೇತರಿಕೆಗೆ ಮುಲ್ಕಿಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಶೇಷ ಪ್ರಾರ್ಥನೆ

ಮುಲ್ಕಿ: ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ರವರು ರಾಜಕೀಯಪಟು ವಾಗಿದ್ದು ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ಎಲ್ಲರ ಪ್ರೀತಿಪಾತ್ರರಾದ ನಾಯಕರಾಗಿದ್ದರು.ಅವರ ಆರೋಗ್ಯ ಶೀಘ್ರದಲ್ಲಿ ಚೇತರಿಸಿ ಕೊಳ್ಳಲಿ ಎಂದು ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್ ಹೇಳಿದರು.

ಅವರು ಕೇಂದ್ರದ ಮಾಜಿ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ರವರ ಆರೋಗ್ಯವು ಶೀಘ್ರ ಚೇತರಿಕೆಗೆ ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮುಲ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು.

ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುರಾಜ್ ಎಸ್ ಪೂಜಾರಿ , ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಧನಂಜಯ ಮಟ್ಟು ಮಾತನಾಡಿದರು.

ಈ ಸಂದರ್ಭ ಕೆಮ್ರಾಲ್ ಗ್ರಾ ಪಂ ಅಧ್ಯಕ್ಷೆ ಲೀಲಾ ಕೃಷ್ಣಪ್ಪ, ಸದಸ್ಯ ಮಯ್ಯದ್ದಿ ಪಕ್ಷಿಕೆರೆ ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯ ಕಾರ್ಯದರ್ಶಿ ಪ್ರವೀಣ್ ಕುಮಾರ್ ಬೊಳ್ಳೂರು, ಕಾಂಗ್ರೆಸ್ ನಾಯಕರಾದ ಉಮೇಶ್ ಪೂಜಾರಿ, ದಿನೇಶ್ ಸುವರ್ಣ ಬೆಳ್ಳಾಯರು, ಮತ್ತಿತರರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

29/07/2021 08:24 pm

Cinque Terre

11.58 K

Cinque Terre

0

ಸಂಬಂಧಿತ ಸುದ್ದಿ